ಮಾ.8ರಿಂದ ಮಾ.14 : ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪರಿಹಾರ ಕಾರ್ಯ

Puttur: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಭಿವೃದ್ಧಿ ಕೆಲಸಗಳ ಬಗ್ಗೆ ನಡೆದ ತಾಂಬೂಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ವಿವಿಧ ಪರಿಹಾರ ಕಾರ್ಯ ಮಾ.8ರಿಂದ ನಡೆಯಲಿದೆ.

ಮಾ.8 ರಂದು ಸಂಜೆ 6 ರಿಂದ ಅಘೋರ ಹೋಮ, ಬಾದೋಚ್ಚಾಟನೆ, ವನದುರ್ಗಾಹೋಮ. ಮಾ.೯ಕ್ಕೆ ಬೆಳಿಗ್ಗೆ ಗಂಟೆ ೮ಕ್ಕೆ ಸಾಮೂಹಿಕ ಪ್ರಾರ್ಥನೆ, ಗಣಪತಿ ಹೋಮ, ನವಗ್ರಹ ಶಾಂತಿಹೋಮ, ಮೃತ್ಯುಂಜಯ ಹೋಮ, ಸಂಜೆ ಗಂಟೆ ೪ ರಿಂದ ದುರ್ಗಾಪೂಜೆ, ರಾತ್ರಿ ಗಂಟೆ ೮ಕ್ಕೆ ದೈವ ತಂಬಿಲ, ಮಾ.೧೦ಕ್ಕೆ ಬೆಳಿಗ್ಗೆ ಗಂಟೆ ೭.೩೦ ರಿಂದ ಪವಮಾನ ಹೋಮ, ಭೂ ವರಾಹ ಶಾಂತಿ, ತಿಲಹೋಮ, ಹಾಗು ಮಾ.೧೧ಕ್ಕೆ ಸರ್ಪಸಂಸ್ಕಾರ, ಮಾ.೧೪ಕ್ಕೆ ಬೆಳಿಗ್ಗೆ ಪಂಚಗವ್ಯ, ಪುಣ್ಯಾರ್ಚನೆ, ಆಶ್ಲೇಷ ಬಲಿ, ಬ್ರಹ್ಮಚಾರಿ ಆರಾಧನೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರುಗಳು ಮತ್ತು ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್ ವಿನಂತಿಸಿದ್ದಾರೆ.
Comments are closed.