Passport: ಪಾಸ್ಪೋರ್ಟ್ ನಿಯಮದಲ್ಲಿ ಮಹತ್ವದ ಬದಲಾವಣೆ – ಜನ್ಮ ದಿನಾಂಕ ಪುರಾವೆಗೆ ಇನ್ನು ಈ ದಾಖಲೆ ಕಡ್ಡಾಯ!!

Share the Article

Passport: ವರ್ಷಗಳು ಉರುಳಿದಂತೆ ಸರ್ಕಾರವು ಕೆಲವೊಂದು ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತದೆ. ಕೆಲವು ಸೌಲಭ್ಯಗಳು ಜನರಿಗೆ ಅನಿವಾರ್ಯವಾದ ಕಾರಣ ಅದರ ನಿಯಮದಲ್ಲಾದ ಬದಲಾವಣೆಗಳ ಕುರಿತು ಅರಿತುಕೊಳ್ಳುವುದು ತುಂಬಾ ಅಗತ್ಯ. ಅಂತೀಯ ಇದೀಗ ಪಾಸ್ಪೋರ್ಟ್ ನಿಯಮದಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಿದ್ದು ಅದರ ಸಂಪೂರ್ಣ ವಿವರ ಇಲ್ಲಿದೆ.

ಹೌದು, ಪಾಸ್‌ಪೋರ್ಟ್ ನಿಯಮಗಳಲ್ಲಿ ಕೇಂದ್ರ ಸರ್ಕಾರವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ಅದು ಕೂಡ ಜನ್ಮ ದಿನಾಂಕದ ಪುರಾವೆಯಾಗಿ ನೀಡುತ್ತಿದ್ದ ಜನನ ಪ್ರಮಾಣ ಪತ್ರದ ವಿಚಾರವಾಗಿ. ಇದುವರೆಗೂ ಪಾಸ್ಪೋರ್ಟ್ ಗೆ ಅರ್ಜಿ ಹಾಕುವವರು ಜನ್ಮ ದಿನಾಂಕದ ಪುರಾವೆಯಾಗಿ ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಚುನಾವಣಾ ಫೋಟೋ ಗುರುತಿನ ಚೀಟಿ ಅಥವಾ ಶಾಲಾ ವರ್ಗಾವಣೆ ಪ್ರಮಾಣಪತ್ರದಂತಹ ಪರ್ಯಾಯ ದಾಖಲೆಗಳನ್ನು ಸಲ್ಲಿಸುತ್ತಿದ್ದರು. ಆದ್ರೆ ಇನ್ನು ಮುಂದೆ ಅಕ್ಟೋಬರ್ 1, 2023ರ ನಂತರ ಜನಿಸಿದ ಅರ್ಜಿದಾರರಿಗೆ ಜನನ ಪ್ರಮಾಣಪತ್ರವನ್ನು ಮಾತ್ರ ಜನ್ಮ ದಿನಾಂಕದ ಪುರಾವೆಯಾಗಿ ಪರಿಗಣಿಸಲಾಗುತ್ತಿದೆ. ಈ ಮಹತ್ವದ ತಿದ್ದುಪಡಿಯನ್ನು 1980ರ ಪಾಸ್‌ಪೋರ್ಟ್ ನಿಯಮಗಳಿಗೆ ಅಧಿಕೃತ ಅಧಿಸೂಚನೆಯ ಮೂಲಕ ಜಾರಿಗೆ ತರಲಾಗಿದೆ.

ಏನು ಹೇಳುತ್ತೆ ಹೊಸ ನಿಯಮ? 

ಹೊಸ ನಿಯಮಗಳ ಪ್ರಕಾರ, ಅಕ್ಟೋಬರ್ 1, 2023ರ ನಂತರ ಜನಿಸಿದ ಪಾಸ್‌ಪೋರ್ಟ್ ಅರ್ಜಿದಾರರು ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಜನನ ಪ್ರಮಾಣಪತ್ರವನ್ನು ಮಾತ್ರ ಜನ್ಮ ದಿನಾಂಕದ ಪುರಾವೆಯಾಗಿ ಸಲ್ಲಿಸಬೇಕಾಗುತ್ತದೆ.

ತಿದ್ದುಪಡಿ ಮಾಡಲಾದ ಪಾಸ್‌ಪೋರ್ಟ್ (ತಿದ್ದುಪಡಿ) ನಿಯಮಗಳು 2025ರ ಪ್ರಕಾರ, ಜನನ ಮತ್ತು ಮರಣಗಳ ನೋಂದಣಿ ನೋಂದಣಿದಾರರು, ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ, 1969ರ ಅಡಿಯಲ್ಲಿ ಅಧಿಕಾರ ಪಡೆದ ಯಾವುದೇ ಇತರ ಪ್ರಾಧಿಕಾರವು ನೀಡಿದ ಜನನ ಪ್ರಮಾಣಪತ್ರಗಳನ್ನು ಅಕ್ಟೋಬರ್ 1, 2023ರಂದು ಅಥವಾ ನಂತರ ಜನಿಸಿದ ವ್ಯಕ್ತಿಗಳಿಗೆ ಜನ್ಮ ದಿನಾಂಕದ ಪುರಾವೆಯಾಗಿ ಮಾತ್ರ ಸ್ವೀಕರಿಸಲಾಗುತ್ತದೆ.

ಇನ್ನು 2023 ಅಕ್ಟೋಬರ್ ಒಂದರ ಮುಂಚಿತವಾಗಿ ಜನಿಸಿದವರು ಮೊದಲಿದ್ದ ನಿಯಮವನ್ನೇ ಪಾಲಿಸಬೇಕು. ಅಂದರೆ ಅರ್ಜಿದಾರರು ಜನ್ಮ ದಿನಾಂಕದ ಪುರಾವೆಯಾಗಿ ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಚುನಾವಣಾ ಫೋಟೋ ಗುರುತಿನ ಚೀಟಿ ಅಥವಾ ಶಾಲಾ ವರ್ಗಾವಣೆ ಪ್ರಮಾಣಪತ್ರದಂತಹ ಪರ್ಯಾಯ ದಾಖಲೆಗಳನ್ನು ಸಲ್ಲಿಸುವುದನ್ನು ಮುಂದುವರಿಸಬಹುದು.

Comments are closed.