Dr Rajkumar: ರಾಜಕುಮಾರ್ ನಿಂದ ನಡೆದಿತ್ತು ಆತ್ಮಹತ್ಯೆ ಪ್ರಯತ್ನ!! ಮತ್ತೆ ಬದುಕುಳಿದಿದ್ದು ಹೇಗೆ ಗೊತ್ತಾ?

Dr Rajkumar: ವರನಟ ಡಾ ರಾಜಕುಮಾರ್ ಎಂದರೆ ಕನ್ನಡಿಗರ ಜೀವನಾಡಿ ಎಂದೆನ್ನಬಹುದು. ನಾಡಿನ ಅನೇಕರು ಅವರನ್ನು ದೇವರು, ಕಲಾ ಆರಾಧಕರು ಎಂದೇ ಪೂಜಿಸಿದ್ದಾರೆ. ಆದರೆ ಈಗ ರಾಜಕುಮಾರ್ ಕುರಿತ ಒಂದು ಸೀಕ್ರೆಟನ್ನು ಅವರ ಮಗ ರಾಘವೇಂದ್ರ ರಾಜಕುಮಾರ್ ಅವರು ರಿವಿಲ್ ಮಾಡಿದ್ದಾರೆ.
ಹೌದು, ನಟ ರಾಜ್ ಕುಮಾರ್ ಅವರು ಅದೊಂದು ಘಟನೆಯಿಂದ ನೊಂದು ಜೀವನವೇ ಬೇಡ, ಜೀವನವೇ ಮುಗಿದು ಹೋಯಿತು ಎಂದುಕೊಂಡು ಆತ್ಮಹತ್ಯೆ ಮಾಡಲು ಮುಂದಾಗಿದ್ದರು ಎಂಬ ವಿಚಾರವನ್ನು ರಾಘವೇಂದ್ರ ರಾಜಕುಮಾರ್ ಅವರು ಬಯಲು ಮಾಡಿದ್ದಾರೆ. ಅಷ್ಟೇ ಅಲ್ಲದೆ ಮತ್ತೆ ಆ ಒಂದು ನಿರ್ಧಾರದಿಂದ ಅವರು ಹಿಂದೆ ಸರಿಯಬೇಕಾಗಿತ್ತು ಎಂದು ಅದಕ್ಕೂ ಅವರು ಕಾರಣವನ್ನು ನೀಡಿದ್ದಾರೆ.
ರಾಘವೇಂದ್ರ ರಾಜಕುಮಾರ್ ಹೇಳಿದ್ದೇನು?
ನಟ ರಾಜ್‌ಕುಮಾರ್ ಅವರು 1952-53ರಲ್ಲಿ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರನ್ನು ಕಳೆದುಕೊಳ್ಳುತ್ತಾರೆ. ಆಗ ಮುತ್ತರಾಜ್ ಆಗಿದ್ದ ಡಾ ರಾಜ್‌ಕುಮಾರ್ ಅವರು ‘ಜೀವನ ಇನ್ಮೇಲೆ ಮುಗಿದೋಯ್ತು..’ ಅಂತ ನಿರ್ಧಾರ ಮಾಡ್ತಾರೆ. ಆಗ ಡಾ ರಾಜ್‌ಕುಮಾರ್ ತಾಯಿ ‘ಬ್ಯಾಡ ಕಂದಾ.. ನೀನು ಆತ್ಮಹತ್ಯೆ ಮಾಡಿಕೊಂಡ್ರೆ ನಿಮ್ಮ ತಂದೆ ಆತ್ಮಕ್ಕೆ ಶಾಂತಿ ಸಿಗಲ್ಲ..’ ಅಂತ ಹೇಳ್ತಾರೆ. ಆಗ ಮುತ್ತುರಾಜ್ ಅವರು ತಮ್ಮ ಆತ್ಮಹತ್ಯೆ ನಿರ್ಧಾರ ಬಿಟ್ಟು ಮತ್ತೆ ಬದುಕಲು ನಿರ್ಧರಿಸುತ್ತಾರೆ. 1953ರಲ್ಲಿ ಮುತ್ತುರಾಜ್ ಅವರು ಪಾರ್ವತಮ್ಮ ಅವರನ್ನು ಮದುವೆ ಆಗ್ತಾರೆ. ಅದೇ ವರ್ಷ ಡಾ ಮುತ್ತುರಾಜ್ ಅವರಿಗೆ ಸಿನಿಮಾದಲ್ಲಿ ನಟಿಸಲು ಕರೆ ಬರುತ್ತೆ. ಅದು 1953ರಲ್ಲೇ ನಡೆದಿದ್ದು, ಅದು ‘ಬೇಡರ ಕಣ್ಣಪ್ಪ’ ಚಿತ್ರದ ಆಡಿಷನ್. ಅಲ್ಲಿ ಆಯ್ಕೆಯಾದ ನಾಟಕದ ಕಲಾವಿದ ಮುತ್ತುರಾಜ ಮುಂದೆ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ (Bedara Kannappa) ನಟಿಸಿ ಸಿನಿಮಾ ನಟರಾಗಿ ಬೆಳೆಯುತ್ತಾರೆ. ಮುತ್ತುರಾಜ ಹೆಸರು ‘ರಾಜ್‌ಕುಮಾರ್’ ಎಂದು ಬದಲಾಗುತ್ತದೆ ಎಂಬುದಾಗಿ ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.
ಇದು 953ರಲ್ಲಿ ತಮ್ಮ ತಂದೆ ಹೋದ ಬಳಿಕ ಸಾಯುವ ನಿರ್ಧಾರ ಮಾಡಿದ್ದ ಮುತ್ತುರಾಜ್ ಅವರು ಬಳಿಕ ಬದುಕಿ, ಡಾ ರಾಜ್‌ಕುಮಾರ್ ಆಗಿರುವ ಕಥೆ. ಸಂದರ್ಶನ ಒಂದರಲ್ಲಿ ಅವರ ಮಗನೇ ತಮ್ಮ ತಂದೆ ಜೀವನದ ಈ ಒಂದು ಕಹಿ ಘಟನೆಯನ್ನು ಬಯಲು ಮಾಡಿದ್ದು, ಇದನ್ನು ಕೇಳಿ ಅಭಿಮಾನಿಗಳು ಕೂಡ ದಿಗ್ಭ್ರಮೆಗೊಂಡಿದ್ದಾರೆ.
Comments are closed.