Belagavi: ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಹಿರಿಯ ಪುತ್ರಿ ಕೃತಿಕಾ ನಿಧನ!

Belagavi: ಬೆಳಗಾವಿ ಜಿಲ್ಲೆಯ ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರ ಹಿರಿಯ ಪುತ್ರಿ ಕೃತಿಕಾ ಭರಮಗೌಡ ಕಾಗೆ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಕೃತಿಕಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾರ್ಚ್ 1 ರಂದು ನಿಧನ ಹೊಂದಿದ್ದಾರೆ. ಮೃತರಿಗೆ 37 ವರ್ಷ ವಯಸ್ಸಾಗಿತ್ತು, ಇವರಿಗೆ ಮೂರುವರೆ ವರ್ಷದ ಮಗಳಿದ್ದಾಳೆ.
ಇಂದು ಸ್ವಗ್ರಾಮ ಉಗಾರದಲ್ಲಿ ಕೃತಿಕಾ ಕಾಗೆ ಅಂತ್ಯಕ್ರಿಯೆ ನಡೆಯಲಿರುವ ಕುರಿತು ಕುಟುಂಬ ಮೂಲಗಳು ತಿಳಿಸಿದೆ.
Comments are closed.