ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನೆ

ಅಧ್ಯಕ್ಷರಾಗಿ ಶಶಿಧರ ಶೆಟ್ಟಿ, ಸಂಚಾಲಕರಾಗಿ ಶಾಸಕ ಹರೀಶ್ ಪೂಂಜ

Belthangady : 700 ವರ್ಷಗಳಷ್ಟು ಹಳೆಯದಾದ, ಭೂಗರ್ಭದಲ್ಲಿ ಲೀನವಾಗಿ ಸಂಪೂರ್ಣ ಕುರುಹು ಇಲ್ಲವಾಗಿದ್ದ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಜಮೀನಿನ ದಾಖಲೆ ಪತ್ರ ಮಾಡಿಸಿಕೊಟ್ಟಿದ್ದರು.

ಇದರಿಂದ ಪುರಾತನ ದೇವಾಲಯವಿದ್ದ ಜಮೀನನ್ನು ವಶಕ್ಕೆ ಪಡೆದು, 2023ರ ಅ.30ರಂದು ದೈವಜ್ಞ ಮಾಡಾವು ವೆಂಕಟ್ರಮಣ ಭಟ್ ನಿರ್ದೇಶನದಂತೆ 2023ರ ನ.5ರಂದು ಭೂಮಿ ಪೂಜೆ, ವೈದಿಕ ವಿಧಿವಿಧಾನಗಳನ್ನ – ನೆರವೇರಿಸಲಾಗಿತ್ತು. ಭೂ ಉತ್ಪನನ ಮಾಡಿದಾಗ ಬಾವಿ ಇದ್ದ ಜಾಗದಲ್ಲಿ 15 ಅಡಿ ಆಳದಲ್ಲಿ ಭವ್ಯವಾದ ಶ್ರೀ ಗೋಪಾಲಕೃಷ್ಣ ದೇವರ ವಿಗ್ರಹ ಹಾಗೂ ಅವಶೇಷಗಳು ಪತ್ತೆಯಾಗಿದ್ದವು.

ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ 22.04.23ರಂದುಶಾಸಕ ಹರೀಶ್ ಪೂಂಜ ಭಾಗವಹಿಸಿ ಶಿಲಾನ್ಯಾಸ ನಡೆದಿತ್ತು. 13-11-2024ರಂದು ನೂತನವಾಗಿ ನಿರ್ಮಿಸಿದ ಗರ್ಭಗುಡಿಯ ಷಢಾದಾರ ಹಾಗೂ ಗರ್ಭನ್ಯಾಸವನ್ನು ನಡೆಸಲಾಗಿ ಇದೀಗ ಪುನರುತ್ಥಾನದ ಕಾರ್ಯ ಭರದಿಂದ ಸಾಗುತ್ತಿದೆ.

ಊರ ಹಾಗೂ ಪಕ್ಕದ ಗ್ರಾಮದ ದಾನಿಗಳ ನೆರವಿನಿಂದ ಈಗಾಗಲೇ ಗರ್ಭಗುಡಿಯ ಕೆಲಸ ಸಂಪೂರ್ಣಗೊಂಡಿದ್ದು, ಸುತ್ತು ಪೌಳಿಯ ಕೆಲಸ ನಡೆಯುತ್ತಿದೆ. ಎಪ್ರಿಲ್ 30ರಂದು ವಿಜೃಂಭಣೆಯಿಂದ ಶ್ರೀಗೋಪಾಲಕೃಷ್ಣದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದೆ೦ದು ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು.

ಶಾಸಕ ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಬರೋಡ, ಗೌರವಾಧ್ಯಕ್ಷರಾಗಿ ಗಣೇಶ್ ರಾವ್ ಕರಾವಳಿ ಕಾಲೇಜು, ಸಂಸದ ಬ್ರಿಜೇಶ್ ಚೌಟ, ಯೋಗೀಂದ್ರ ಭಟ್ ಉಳಿ, ಕರುಣಾಕರ ಸುವರ್ಣ ಉಪ್ಪಿನಂಗಡಿ, ಸಂಚಾಲಕರಾಗಿ ಹರೀಶ್ ಪೂಂಜ, ಕಾರ್ಯಾಧ್ಯಕ್ಷರಾಗಿ ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ, ಕೋಶಾಧಿಕಾರಿಯಾಗಿ ಅಣ್ಣು ಪೂಜಾರಿ ಹಾಗೂ ವಿವಿಧ ಉಪಸಮಿತಿಗಳು ಸಂಚಾಲಕರನ್ನು ಆಯ್ಕೆ ಮಾಡಲಾಯಿತು.

ಸಮಾಲೋಚನಾ ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ನಾಗಭೂಷಣ್ ರಾವ್, ತುಕರಾಂ ನಾಯಕ್, ಶಶಿಧರ ಶೆಟ್ಟಿ ಬರೋಡ, ಗಣೇಶ್ ರಾವ್, ಹರೀಶ್ ಪೂಂಜ, ದ.ಗ್ರಾ.ಯೋಜನೆಯ ದಯಾನಂದ ಪೂಜಾರಿ, ನವೀನ್ ನೆರಿಯ ಉಪಸ್ಥಿತರಿದ್ದರು.

Comments are closed.