Putturu : ಗ್ರಾಹಕ ಸ್ನೇಹಿ ಉದ್ಯಮಿ ಸೋಜಾ ಮೆಟಲ್ ಮಾರ್ಟ್ ಮಾಲಕ ಅಲೆಕ್ಸ್ ಮಿನೇಜಸ್ ನಿಧನ

Share the Article

Putturu : ಪುತ್ತೂರು ಮುಖ್ಯರಸ್ತೆಯ ಸೋಜಾ ಮೆಟಲ್ ಮಾರ್ಟ್ ಮಾಲಕ ಅಲೆಕ್ಸ್ ಮಿನೇಜಸ್(69ವ.) ರವರು ಹೃದಯಾಘಾತದಿಂದ ಫೆ.27 ರಂದು ರಾತ್ರಿ ನಿಧನರಾದರು

ಉದ್ಯಮಿ ಅಲೆಕ್ಸ್‌ ಮಿನೇಜಸ್ ರವರು ಮನೆಯಲ್ಲಿದ್ದ ವೇಳೆ ಹೃದಯ ಬೇನೆಗೆ ತುತ್ತಾಗಿದ್ದ ಅವರನ್ನು ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.

ದರ್ಬೆ ಸಿ.ಟಿ.ಒ ರಸ್ತೆ ನಿವಾಸಿಯಾಗಿದ್ದ ಅಲೆಕ್ಸ್ ಮಿನೇಜಸ್ ಅವರು ಸೋಜಾ ಮೆಟಲ್ ಮಾರ್ಟ್ ಸಂಸ್ಥೆಯನ್ನು ಸುಮಾರು 40 ವರ್ಷಕ್ಕೂ ಮಿಕ್ಕಿ ಮುನ್ನೆಡೆಸುತ್ತಿದ್ದು, ಸಾರ್ವಜನಿಕ ವಲಯದಲ್ಲಿ ನಗುಮುಖದ ಸೇವೆಯೊಂದಿಗೆ ಗ್ರಾಹಕ ಸ್ನೇಹಿಯಾಗಿದ್ದರು.

ಅಲೆಕ್ಸ್ ಮಿನೇಜಸ್ ಅವರು, ಮಾಯಿದೆ ದೇವುಸ್ ಚರ್ಚ್ ನ ಡೊನ್ ಬೊಸ್ಕೊ ಕ್ಲಬ್ ಹಾಗೂ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿಯ ಸ್ಥಾಪಕ ಸದಸ್ಯರಾಗಿದ್ದರು.ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲೂ ಅವರು ಸಮಾಜ ಸೇವೆಯ ಮೂಲಕ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ನಿವೃತ್ತ ಶಿಕ್ಷಕಿ ಡೊರತಿ ಮಿನೇಜಸ್, ಪುತ್ರ ಸೋಜಾ ಮೆಟಲ್ ಮಾರ್ಟ್ ಸಂಸ್ಥೆಯನ್ನು ಮುನ್ನೆಡೆಸುತ್ತಿರುವ ದೀಪಕ್ ಮಿನೇಜಸ್, ಪುತ್ರಿಯರಾದ ದೀಪ್ತಿ ಮಿನೇಜಸ್, ದಿವ್ಯ ಮಿನೇಜಸ್ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Comments are closed.