Mangaluru: ತುಳು – ಕನ್ನಡ ಅನುವಾದ ಕಾರ್ಯಾಗಾರ: ನೊಂದಣಿಗೆ ಮಾ.2 ಕೊನೆ ದಿನ

Share the Article

Mangaluru: ಕರಾವಳಿ ಲೇಖಕಿಯರ ಮತ್ತು ವಾಚಕೀಯರ ಸಂಘ ಹಾಗೂ ದ್ರಾವಿಡ ಭಾಷಾ ಅನುವಾದಕರ ಸಂಘದ ಸಂಯುಕ್ತಾಶ್ರಯದಲ್ಲಿ ಮಾರ್ಚ್ 8ರಂದು ಒಂದು ದಿನದ ತುಳು – ಕನ್ನಡ ಭಾಷಾಂತರ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಸಭಾಂಗಣ ‘ಸಾಹಿತ್ಯ ಸದನ’ದಲ್ಲಿ ಹಮ್ಮಿಕ್ಕೊಳ್ಳುವ ಕಾರ್ಯಾಗಾರದಲ್ಲಿ ಖ್ಯಾತ ಭಾಷಾಂತರಕಾರರು ತುಳು ವಿನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ತುಳುವಿಗೆ ಭಾಷಾಂತರ ಮಾಡುವಾಗ ಎದುರಾಗುವ ಸಮಸ್ಯೆಗಳನ್ನು ಕುರಿತು ತರಗತಿಗಳನ್ನು ತೆಗೆದುಕೊಳ್ಳಲಿದ್ದಾರೆ. ಕನ್ನಡ ಮತ್ತು ತುಳು ಗೊತ್ತಿರುವ, ಅನುವಾದದಲ್ಲಿ ಆಸಕ್ತಿಯುಳ್ಳವರು ಮಾರ್ಚ್ 2 ರೊಳಗೆ ನಿಮ್ಮ ಹೆಸರು ನೋಂದಾಯಿಸಬಹುದು. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು. ನೋಂದಣಿ ಶುಲ್ಕವಿಲ್ಲ. ಊಟದ ವ್ಯವಸ್ಥೆ ಮಾಡಲಾಗುತ್ತದೆ. ಕಮ್ಮಟದಲ್ಲಿ ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ದ್ರಾವಿಡ ಭಾಷಾ ಅನುವಾದಕರ ಸಂಘದ ಅಧ್ಯಕ್ಷೆ ಡಾ.ಸುಷ್ಮಾ ಶಂಕರ್ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

9901041889 ಡಾ.ಸುಷ್ಮಶಂಕರ್

8147212724 ಪ್ರೊ.ರಾಕೇಶ್. ವಿ. ಎಸ್. ಇವರನ್ನು ಸಂಪರ್ಕಿಸಬಹುದು.

Comments are closed.