Davanagere: ಲಾಭದ ಆಸೆ; ಆನ್‌ಲೈನ್ ಮೂಲಕ 27 ಲಕ್ಷ ಕಳೆದುಕೊಂಡ ಮಹಿಳೆ!

Davanagere: ʼಫಾಲ್ ಕಾನ್ ಇನ್‌ವಾಯ್ಸಸ್ʼ ಎಂಬ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ ಗೂಗಲ್‌ನಲ್ಲಿ ಹುಡುಕಾಡಿದ ನಂತರ ಮಹಿಳೆಯೊಬ್ಬರು ಈ ಕಂಪನಿಯಲ್ಲಿ ಮೂರು ವರ್ಷದಿಂದ ಆನ್‌ಲೈನ್ ಮೂಲಕ ಹಣ ಹೂಡಿಕೆ ಮಾಡಿಕೊಂಡು ಬಂದಿದ್ದರು. ಮಹಿಳೆಗೆ ನಂಬಿಕೆ ಬರುವ ರೀತಿಯಲ್ಲಿ ಲಾಭಾಂಶವನ್ನು ಕೂಡಾ ಕಂಪನಿ ನೀಡಿತ್ತು. ಪ್ರತಿ ಬಾರಿಯೂ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಬರುತ್ತಿತ್ತು.
2024 ರ ಅಕ್ಟೋಬರ್ 3 ರಂದು ಕರೆ ಮಾಡಿದ ಕಂಪನಿಯ ವ್ಯಕ್ತಿಯೋರ್ವ ಹೆಚ್ಚು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಬರುವುದಾಗಿ ತಿಳಿಸಿದ್ದ. 115 ದಿನಗಳಲ್ಲಿ 21.75 ಲಾಭಾಂಶ ನೀಡುವುದಾಗಿ ತಿಳಿಸಿದ್ದ. ನಂತರ ಅಗ್ರಿಮೆಂಟ್ ಕಾಪಿ ಕೂಡಾ ಬಂತು. ಇದರಿಂದ ಮಹಿಳೆಗೆ ನಂಬಿಕೆ ಹೆಚ್ಚಾಯ್ತು. ನಂತರ ಕಂಪನಿ ಪ್ರತಿನಿಧಿ ಎಂದು ಹೇಳಿದಾತ ಐಸಿಐಸಿಐ ಬ್ಯಾಂಕ್ ಖಾತೆಗೆ, ಫಾಲ್‌ಕಾನ್ ಇನ್ ವಾಯ್ಸಸ್ ಆಪ್ ಮೂಲಕ 2024 ರ ಅ.3 ರಂದು ತಮ್ಮ ಖಾತೆಯಿಂದ 9 ಲಕ್ಷ ರೂ. ಅ.4 ರಂದು 9 ಲಕ್ಷ ರೂ ಮಹಿಳೆ ವರ್ಗಾವಣೆ ಮಾಡಿದ್ದಾರೆ. ಡಿ.3 ರಂದು ಮತ್ತೊಮ್ಮೆ ತಮ್ಮ ಪತಿ ಖಾತೆಯಿಂದ 9 ಲಕ್ಷ ರೂ. ಸೇರಿ ಒಟ್ಟು 27 ಲಕ್ಷ ರೂ. ವರ್ಗಾವಣೆ ಮಾಡಿದ್ದರು.
ಆದರೆ 115 ದಿನ ಕಳೆದ ನಂತರ ಕಂಪನಿಯ ಲಾಭಾಂಶ ಬಂದಿಲ್ಲ. ಇದರಿಂದ ಅನುಮಾನ ಬಂದು ವಿಚಾರಣೆ ಮಾಡಿದಾಗ ಕಂಪನಿ ಮುಚ್ಚಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಇದೀಗ ದಂಪತಿ ರಾಷ್ಟ್ರೀಯ ಸೈಬರ್ ಪೋರ್ಟಲ್ ಮೂಲಕ ದೂರನ್ನು ದಾಖಲು ಮಾಡಿದ್ದಾರೆ.
Comments are closed.