Prayagraj: ಮಹಾಕುಂಭದ ಅಂತ್ಯದ ವೇಳೆ ಬಾಹ್ಯಾಕಾಶದಲ್ಲಿ ಏಳು ಗ್ರಹಗಳ ಗೋಚರ

Share the Article

Prayagraj: ಮಹಾಕುಂಭ ಮೇಳ ಅಂತ್ಯಗೊಳ್ಳುವ ಫೆ.28 ರಂದು ಬಾಹ್ಯಾಕಾಶದಲ್ಲಿ ಅಚ್ಚರಿಯ ಬೆಳವಣಿಗೆಯೊಂದು ನಡೆಯಲಿದೆ. ಏಳು ಗ್ರಹಗಳು, ಬುಧ, ಶುಕ್ರ, ಮಂಗಳ, ಗುರು, ಶನಿ, ಯುರೇನಸ್‌ ಹಾಗೂ ನೆಪ್ಚೂನ್‌ ಗ್ರಹಗಳು ರಾತ್ರಿ ವೇಳೆ ಸೌರವ್ಯೂಹದಲ್ಲಿ ಒಂದೇ ಸಾಲಿನಲ್ಲಿ ಕಾಣಸಿಗಲಿದೆ.

ಖಗೋಳ ವಿಜ್ಞಾನದ ಈ ಕೌತುಕವು ಕಳೆದ ಜನವರಿಯಲ್ಲಿ ಆರಂಭವಾಗಿದೆ. ಬುಧ ಗ್ರಹವು ಸದ್ಯ ʼಪ್ಲನೆಟ್‌ ಪರೇಡ್‌ʼ ಗೆ ಸೇರ್ಪಡೆಯಾಗಲಿದೆ. ಫೆ.28 ರಂದು ಈ ಪರೇಡ್‌ ಸ್ಪಷ್ಟವಗಿ ಗೋಚರವಾಗಲಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ತಿಳಿಸಿದ್ದಾರೆ.

ಬರಿಗಣ್ಣಿಗೆ ಐದು ಗ್ರಹಗಳು ಕಾಣಸಿಗಲಿದ್ದು, ಉಳಿದ ಗ್ರಹಗಳನ್ನು ಬೈನಾಕ್ಯುಲರ್‌ ಅಥವಾ ಟೆಲಿಸ್ಕೋಪ್‌ ಮೂಲಕ ನೋಡಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೂಡಾ ಚರ್ಚೆಗಳು ಹೆಚ್ಚಿದೆ.

Comments are closed.