ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳ ಪ್ರಥಮ ಸಭೆ

Share the Article

ಮಂಗಳೂರು: ದ ಕ ಜಿಲ್ಲಾ ಯುವ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳ‌ ಪ್ರಥಮ ಸಭೆಯು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ‌ಮಂಗಳವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಸಿ ಅಧ್ಯಕ್ಷರಾದ ಹರೀಶ್ ಕುಮಾರ್ ಮಾತನಾಡಿ ಯುವಕರೇ ಕಾಂಗ್ರೆಸ್ ಪಕ್ಷದ ಫೌಂಡೇಶನ್ ಆಗಿದ್ದು, ಯುವಕರೇ ಮುಂದೆ ಪಕ್ಷವನ್ನು ಕಟ್ಟಬೇಕಾಗಿದೆ . ಪಕ್ಷದಲ್ಲಿ ಶಿಸ್ತು ಪಾಲನೆ ಅತೀ ಮುಖ್ಯವಾಗಿದೆ. ಈ ಹಿಂದೆ ಇದ್ದ ಜೋಶ್ ಮತ್ತೆ ಕಾಂಗ್ರೆಸ್ಸಿಗರಲ್ಲಿ‌ಮೂಡಿಬರುವಂತೆ ಮಾಡಬೇಕಿದೆ ಎಂದು ಹೇಳಿದರು.

ಪಕ್ಷಕ್ಕಾಗಿ ಕೆಲಸ ಮಾಡುವ ಮೂಲಕ ನಾಯಕರಾಗಬೇಕು. ಪಕ್ಷದ ತತ್ಬ ಸಿದ್ದಾಂತದ ಮೇಲೆ ನಾವು ಮುಂದುವರೆಯಬೇಕು.‌ಬೂತ್ ಮಟ್ಟದಲ್ಲಿ ಯುವಕರನ್ನು ಸಂಘಟಿಸಿ ಪಕ್ಷ ಬೆಳೆಯುವಂತೆ ಮಾಡಬೇಕು ಎಂದು ಹೇಳಿದರು. ಯುವಕ ಕಾಂಗ್ರೆಸ್ ಪದಾಧಿಕಾರಿಗಳಾದವರು‌ದಿನದಲ್ಲಿ‌ಕನಿಷ್ಟ ಮೂರು ಗಂಟೆ ಪಕ್ಷಕ್ಕಾಗಿ ಕೆಲಸ ಮಾಡಬೇಕು, ಪಕ್ಷದ ವೃದ್ದಿಗಾಗಿ ಏನೆಲ್ಲಾ ಯುವಕರಿಂದ ಮಾಡಬಹುದೋ ಅದೆಲ್ಲವನ್ನೂ ಮಾಡಬೇಕು,ಕ್ರೀಡಾಕೂಟವನ್ನು ಸೇರಿದಂತೆ ವಿವಿಧ ಪಂದ್ಯಾವಳಿ ಆಯೋಜಿಸಿ ಯುವಕರನ್ನು ಪಕ್ಷಕ್ಕೆ ಸೆಳೆಯುವ ಕೆಲಸವನ್ನು‌ಮಾಡಬೇಕು‌ ಎಂದ ಅವರು ನಾಯಕರ ಹಿಂದೆ ಸುತ್ತಾಡುವುದನ್ನು ಕಡಿಮೆ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡಿ ಮುಂದೆ ಜಿಲ್ಲೆಯಲ್ಲಿ ಹಿಂದಿನ‌ಗತ ವೈಭವ ಮರಳಿ ತರುವಲ್ಲಿ ಯುವ ಕಾಂಗ್ರೆಸ್ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಜನರ ಹಿತ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿ ತಂದಿದೆ ಇದು‌ಪ್ರತೀ ಮನೆಗೂ ಮುಟ್ಟಿದೆ ಇದೆಲ್ಲವನ್ನೂ ಜನರ ಬಳಿ ಹೇಳುವ‌ ಮೂಲಕ ಯುವ ಪೀಳಿಗೆಯನ್ನು ಕಾಂಗ್ರೆಸ್ ನತ್ತ ಸೆಳೆಯಬೇಕು ಎಂದು ಹೇಳಿದರು.

ಸೋಶಿಯಲ್‌ಮೀಡಿಯಾದಲ್ಲಿ‌ ಬಿಜೆಪಿಯನ್ನು ಅಟ್ಯಾಕ್ ಮಾಡಿ:
ದೇಶದಲ್ಲಿ ಆಡಳಿತ ನಡೆಸುತ್ತಿರುವ‌ ಮೋದಿ‌ ನೇತೃತ್ವದ ಬಿಜೆಪಿ ಸರಕಾರ ಸುಳ್ಳು ಹೇಳುತ್ತಲೇ ಅಧಿಕಾರ ನಡೆಸುತ್ತಿದೆ.‌ ಇಂದು ದೇಶದ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಇದನ್ನು ಸೋಶಿಯಲ್‌ಮೀಡಿಯಾ ಮೂಲಕ ಜನತೆಗೆ ತಿಳಿಸಿ ಬಿಜೆಪಿ ಮೇಲೆ ಅಟ್ಯಾಕ್ ಮಾಡಬೇಕು ಎಂದು‌ ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ .

ಪುತ್ತೂರು ಶಾಸಕ ಅಶೋಕ್ ರೈ ಅವರು ಮಾತನಾಡಿ ಯುವ ಕಾಂಗ್ರೆಸ್ ಕಾರ್ಯಕರ್ತರು ಬೂತ್‌ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು ಹಾಗಿದ್ದಲ್ಲಿ ಮಾತ್ರ ಮುಂದೆ ದ ಕ ಜಿಲ್ಲೆಯಲ್ಲಿ ಪಕ್ಷ ಇನ್ನಷ್ಟು ಬಲ ವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.‌ಪ್ರತೀ ಬೂತ್ ನಲ್ಲಿ ಯುವಕರ ತಂಡ,‌ಮಹಿಳೆಯರ ತಂಡವನ್ನು ಕಟ್ಟಬೇಕು. ಜಿಲ್ಲೆಯಲ್ಲಿ ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆಯನ್ನು ಮತ್ತಷ್ಟು ಬಲಯುತವಾಗಿಸಬೇಕು ಎಂದು ಹೇಳಿದರು. ಯುವ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳೂ ಪ್ರತೀ ದಿನ ತನ್ನ ಕಾರ್ಯವ್ಯಾಪ್ತಿಯ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬೇಕು ಎಂದು‌ಶಾಸಕರು ತಿಳಿಸಿದರು.

ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಪದ್ಮರಾಜ್ ಆರ್ ಪೂಜಾರಿ, ಇನಾಯತ್ ಆಲಿ , ಪುತ್ತೂರು ಬ್ಲಾಕ್ ಅಧ್ಯಕ್ಷ ಕೆ‌ಪಿ ಆಳ್ವ, ಇಬ್ರಾಹಿಂ ಕೋಡಿಜಾಲ್, ಸೇರಿದಂತೆ ಹಲವು‌ಮಂದಿ ಮುಖಂಡರು ಉಪಸ್ಥಿತರಿದ್ದರು. ಯುವ ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ಇಬ್ರಾಹಿಂ ನವಾಝ್ ಸ್ವಾಗತಿಸಿದರು. ಉಒಆಧ್ಯಕ್ಷ ಸಂಶುದ್ದೀನ್ ಅಜ್ಜಿನಡ್ಕ ಕಾರ್ಯಕ್ರಮ‌ನಿರೂಪಿಸಿದರು.

Comments are closed.