Mysure : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ – ಡೆತ್ ನೋಟ್ ಕೂಡ ಪತ್ತೆ!!

Share the Article

Mysure : ಒಂದೇ ಕುಟುಂಬದ ನಾಲ್ವರು ಅತ್ಮಹತ್ಯೆ ಶರಣಾಗಿರುವ ಘಟನೆಯೊಂದು ಮೈಸೂರಿನ ವಿಶ್ವೇಶ್ವನಗರದ ಅಪಾರ್ಟ್ಮೆಂಟ್ ನಲ್ಲಿ ಸೋಮವಾರ ನಡೆದಿದ್ದು ಆತ್ಮಹತ್ಯೆ ಮಾಡಿಕೊಂಡವರನ್ನು ಕುಶಾಲ್( 15) ಚೇತನ್( 45), ರೂಪಾಲಿ (43), ಪ್ರಿಯಂವದ(65) ಎಂದು ಗುರುತಿಸಲಾಗಿದೆ.

 

ಮೊದಲು ಚೇತನ್ ತನ್ನ ತಾಯಿ, ಪತ್ನಿ ಹಾಗೂ ಮಗನಿಗೆ ವಿಷ ಉಣಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅವರ ಸಾವಿನ ಬಳಿಕ ತಾನು ನೇಣು ಬಿಗಿದು ಅತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಅನುಮಾನಿಸಿದ್ದಾರೆ. ಸ್ಥಳ ಪರಿಶೀಲಿಸಿದ ಪೊಲೀಸರಿಗೆ ಚೇತನ್ ಬರೆದಿಟ್ಟ ಡೆತ್​ನೋಟ್​ ಸಿಕ್ಕಿದೆ. ಅದರಲ್ಲಿ ಸಾಯುವುದರ ಹಿಂದಿರುವ ಕಾರಣವನ್ನು ತಿಳಿಸಿದ್ದಾರೆ.

 

ಡೆತ್ ನೋಟ್ ಪತ್ತೆ :

ಹಣಕಾಸಿನ ಸಮಸ್ಯೆಯಿಂದಾಗಿ ನಾವು ಸಾಯುತ್ತಿದ್ದೇವೆ. ನಮ್ಮ ಸಾವಿಗೆ ಬೇರೆ ಯಾರೂ ಕಾರಣರಲ್ಲ. ನನ್ನ ಸ್ನೇಹಿತರು, ಸಂಬಂಧಿಕರಿಗೆ ಯಾರೂ ತೊಂದರೆ ಕೊಡಬೇಡಿ. ನಮ್ಮನ್ನು ಕ್ಷಮಿಸಿ ಐ ಆಮ್ ಸ್ವಾರಿ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ .

 

ನಾಲ್ವರ ಸಾವಿಗೆ ನಿಖರ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಇನ್ಸ್ ಪೆಕ್ಟರ್ ಮೋಹಿತ್, ಡಿಸಿಪಿ ಜಾಹ್ನನಿ, ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಭೇಟಿ ಪರಿಶೀಲನೆ ನಡೆಸಿ ನಾಲ್ವರ ಸಾವಿನ ಕುರಿತು ತನಿಖೆ ಆರಂಭಿಸಿದ್ದಾರೆ.

Comments are closed.