Delhi ಪ್ರಬಲ ಭೂಕಂಪದ ಭಯಾನಕ ವಿಡಿಯೋ ವೈರಲ್ !!

Delhi: ಇಂದು, ಸೋಮವಾರ (ಫೆಬ್ರವರಿ 17, 2025) ಬೆಳಿಗ್ಗೆ 5.36 ಕ್ಕೆ ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪನವಾಗಿದೆ. ಇದೀಗ ಇದರ ಭಯಾನಕ ವಿಡಿಯೋ ವೈರಲ್ ಆಗಿದೆ.
ಹೌದು, ರಾಷ್ಟ್ರ ರಾಜಧಾನಿಯಲ್ಲಿ ಇಂದು ಬೆಳಿಗ್ಗೆಯೇ ಭೂಕಂಪನದ ಶಾಕ್ ಸಿಕ್ಕಿದೆ. ಬೆಳಿಗ್ಗೆ 5.36 ರ ಸುಮಾರಿಗೆ ದೆಹಲಿಯಲ್ಲಿ ಭೂಕಂಪವಾಗಿದ್ದು ರಿಕ್ಟರ್ ಮಾಪಕದಲ್ಲಿ 4.0 ರಷ್ಟು ತೀವ್ರತೆ ದಾಖಲಾಗಿದೆ. ಸದ್ಯ ಭೂಮಿ ಕಂಪಿಸಿದ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೆಹಲಿ, ನೋಯ್ಡಾ, ಗಾಜಿಯಾಬಾದ್ ಮತ್ತು ಗುರುಗ್ರಾಮ ಸೇರಿದಂತೆ ಹಲವು ಕಡೆಗಳಲ್ಲಿ ಕಟ್ಟಡ, ಮನೆಯಲ್ಲಿರುವ ವಸ್ತುಗಳು ಅಲುಗಾಡಿದ ಅನುಭವವಾಗಿದೆ. ಇದರಿಂದಾಗಿ ಜನ ಭಯಭೀತರಾಗಿದ್ದು ತಕ್ಷಣವೇ ಮನೆಗಳಿಂದ ಹೊರಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ನಷ್ಟ-ಕಷ್ಟಗಳಾದ ವರದಿಯಾಗಿಲ್ಲ. ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
https://x.com/ipawanmina/status/1891283825117782378?t=Bcwz9nQtjM25QuR4Uw3WXg&s=19
ಇನ್ನೂ ರಾಷ್ಟ್ರೀಯ ಭೂಕಂಪ ಕೇಂದ್ರದ ಪ್ರಕಾರ, ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.0 ಆಗಿತ್ತು. ಆರಂಭಿಕ ಮಾಹಿತಿಯ ಪ್ರಕಾರ, ಭೂಕಂಪದ ಕೇಂದ್ರಬಿಂದು ಧೌಲಾ ಕುವಾನ್ ಬಳಿಯ ಲೇಕ್ ಪಾರ್ಕ್ ಬಳಿ ಇತ್ತು ಎನ್ನಲಾಗಿದೆ.
Comments are closed.