Business Ideas: ಈ 5 ಸಣ್ಣ ವ್ಯವಹಾರಗಳಿಂದಲೇ ತಿಂಗಳಿಗೆ ಗಳಿಸಬಹುದು 40 ಸಾವಿರ ರೂಪಾಯಿ! ಬಂಡವಾಳ ಚಿಂತೇನೆ ಇರಲ್ಲ!

Business Ideas: ನಿಮ್ಮ ಕನಸು ನನಸು ಮಾಡಲು ಹಣ ಬೇಕೇ ಬೇಕು. ಅದರಲ್ಲೂ ಸ್ವಂತ ಉದ್ಯಮ ಆರಂಭ ಮಾಡಿದರೆ ಬೇಗನೆ ಹಣ ಸಂಪಾದಿಸಲು ಸಾಧ್ಯ. ಹಾಗಿದ್ರೆ ಅತೀ ಕಡಿಮೆ ಬಂಡವಾಳದಲ್ಲಿ ತಿಂಗಳಿಗೆ 30 ರಿಂದ 40 ಸಾವಿರ ರೂ. ಗಳಿಸಲು ಬಯಸುವವರಿಗೆ 5 ಸಣ್ಣ ವ್ಯವಹಾರಗಳ (Business Ideas) ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಸಮೋಸಾ ಮತ್ತು ಚಾಟ್:
ಸಮೋಸಾ ಸೇರಿದಂತೆ ವಿವಿಧ ಚಾಟ್ ಮಾರಾಟ ಮಾಡುವ ಮೂಲಕ ಈ ವ್ಯವಹಾರ ಆರಂಭಿಸಬಹುದು. ವರ್ಷದ 12 ತಿಂಗಳು ಈ ವ್ಯಾಪಾರ ನಡೆಯುತ್ತದೆ.

ಮೊಮೋಸ್ :
ಇಂದು ಫಾಸ್ಟ್‌ಫುಡ್‌ಗಳಲ್ಲಿ ಮೊಮೋಸ್ ಟ್ರೆಂಡಿಂಗ್‌ನಲ್ಲಿದೆ. ಈ ವ್ಯವಹಾರ ಆರಂಭಿಸಲು 15 ರಿಂದ 20 ಸಾವಿರ ರೂ. ಹಣ ಹೂಡಿಕೆ ಮಾಡಬೇಕಾಗುತ್ತದೆ. ರಸ್ತೆ ಬದಿಯಲ್ಲಿ ಸಣ್ಣದಾಗಿ ಮೊಮೋಸ್ ಮಾರಾಟ ಮಾಡಿ ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿ ಹಣ ನಿಮ್ಮದಾಗುತ್ತದೆ.

ತಿಂಡಿ :
ಇಡ್ಲಿ, ವಡೆ, ದೋಸೆ, ಪಡ್ಡು, ಅವಲಕ್ಕಿ, ಉಪ್ಪಿಟ್ಟು ಸೇರಿದಂತೆ ಸ್ಥಳೀಯ ತಿಂಡಿಗಳನ್ನು ಮಾರಾಟ ಮಾಡುವ ಮೂಲಕ ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಜನಸಂದಣಿ ಹೆಚ್ಚಾಗಿರುವ ಬಸ್ ನಿಲ್ದಾಣ, ಆಸ್ಪತ್ರೆ, ಶಾಲಾ-ಕಾಲೇಜು ಸುತ್ತಮುತ್ತ ಈ ವ್ಯಾಪಾರ ಆರಂಭಿಸಬಹುದು. ಈ ವ್ಯವಹಾರವನ್ನು 15-20 ಸಾವಿರ ರೂ.ಗಳಲ್ಲಿ ಆರಂಭಿಸಿ ತಿಂಗಳಿಗೆ 30-40 ಸಾವಿರ ರೂ.ವರೆಗೂ ಹಣ ಸೇವ್ ಮಾಡಬಹುದು.

ಪಾನಿಪುರಿ:
ದಿನಕ್ಕೆ 4 ರಿಂದ 5 ಗಂಟೆ ಕೆಲಸ ಮಾಡಿ ತಿಂಗಳಿಗೆ 30 ರಿಂದ 40 ಸಾವಿರ ರೂ.ಗಳವರೆಗೆ ಹಣ ಸಂಪದಾನೆ ಮಾಡುವ ವ್ಯವಹಾರಗಳಲ್ಲಿ ಪಾನಿಪುರಿಯೂ ಸಹ ಒಂದಾಗಿದೆ. ಮನೆಯಲ್ಲಿ ಎಲ್ಲ ಮಸಾಲೆ ಮತ್ತು ಪುರಿಯನ್ನು ಸಿದ್ಧಪಡಿಸಿಕೊಂಡರೆ ಲಾಭದ ಪ್ರ,ಮಾಣ ಅಧಿಕವಾಗಿರುತ್ತದೆ.

ಟೀ ಮಾರಾಟ
ನೀವಿರುವ ಪ್ರದೇಶದಲ್ಲಿ ಟೀ ಮಾರಾಟ ಮಾಡಿಯೂ ಹಣ ಸಂಪಾದನೆ ಮಾಡಬಹುದು. ವಿವಿಧ ರೀತಿಯ ಟೀ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯಬಹುದು. ಹಾಗೆಯೇ ಟೀ ಶಾಪ್‌ನಲ್ಲಿ ಬಳಕೆ ಮಾಡುವ ಕಪ್ ಸಹ ಮಾರಾಟವನ್ನು ಹೆಚ್ಚಿಸುತ್ತದೆ.

Comments are closed.