Kottigehara: 35 ವರ್ಷದ ಹಿಂದೆ ತಿಂದ ಊಟದ ಬಿಲ್‌ ಪಾವತಿ ಮಾಡಿದ ಮಂಗಳೂರು ನಿವಾಸಿ; ಎಲ್ಲೆಡೆ ವ್ಯಾಪಕ ಮೆಚ್ಚುಗೆ

Share the Article

Kottigehara: 35 ವರ್ಷಗಳ ಹಳೆಯ ಸಾಲವನ್ನು ವ್ಯಕ್ತಿಯೊಬ್ಬರು ಈಗ ತೀರಿಸಿದ ಅಪರೂಪದ ಘಟನೆಯೊಂದು ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಕೊಟ್ಟಿಗೆಹಾರದ “ಭಾರತ್‌ ಹೋಟೆಲ್‌” ನಲ್ಲಿ ಈ ಘಟನೆ ನಡೆದಿದೆ. ಮಂಗಳೂರಿನ ದೇರಳಕಟ್ಟೆಯ ನಿವಾಸಿಯಾದ ಎಂ.ಎ. ಮಹಮ್ಮದ್‌ ಅವರು 35 ವರ್ಷಗಳ ಹಿಂದೆ ತಿಂದ ಕಡುಬು ಮತ್ತು ಮೀನು ಸಾರಿನ ಹಣವನ್ನು ತೀರಿಸುವ ಉದ್ದೇಶದಿಂದ ಶನಿವಾರ ಕೊಟ್ಟೆಗೆಹಾರಕ್ಕೆ ಬಂದು ಪಾವತಿ ಮಾಡಿದ್ದಾರೆ.

ಅಂದು ಆಪತ್ತಿನ ಸಂದರ್ಭದ ಕಾರಣ ಹೇಳಿ ಹಣ ಪಾವತಿ ಮಾಡದೇ ತೆರಳಿದ್ದ ಇವರು, ಅದನ್ನು ಮನಸ್ಸಿನಲ್ಲಿ ಹಾಗೇ ಉಳಿಸಿಕೊಂಡಿದ್ದರು. ಋಣ ತೀರಿಸುವ ಸಮಯ ಉದ್ದೇಶದಿಂದ ಮತ್ತೆ ಬಂದು, ಹೋಟೆಲ್‌ ಮಾಲೀಕರಾದ ದಿ.ಎಂ.ಇಬ್ರಾಹಿಂ ಅವರ ಪುತ್ರ ಅಜೀಜ್‌ ಅವರನ್ನು ಭೇಟಿ ಮಾಡಿದ್ದು ಹಳೆಯ ಬಾಕಿ ಪಾವತಿ ಮಾಡಿ, ಕ್ಷಮೆ ಕೂಡಾ ಕೇಳಿದ್ದಾರೆ.

ಆರ್ಥಿಕ ತೊಂದರೆ ಕಾರಣದಿಂದ ಅಂದು ಹಣ ಪಾವತಿ ಮಾಡದೇ ತೆರಳಿದ್ದು, ಅದನ್ನು ನೆನಪಿನಲ್ಲಿಟ್ಟುಕೊಂಡು 35 ವರ್ಷದ ನಂತರ ಬಂದು ಪ್ರಾಮಾಣಿಕತೆ ಮೆರೆದಿದ್ದು, ಈಗಿನ ಕಾಲದಲ್ಲಿ ಇದು ಅಪರೂಪ ಎಂದು ಸ್ಥಳೀಯರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Comments are closed.