Gruhalakshmi : ಇನ್ನು ಮುಂದೆ ಈ ಮಹಿಳೆಯರಿಗೆ ಗೃಹಲಕ್ಷ್ಮಿ ದುಡ್ದು ಕ್ಯಾನ್ಸಲ್ !!

Share the Article

Gruhalakshmi : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಕೂಡ ಒಂದು. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂತಹ ಪ್ರತಿ ಮನೆಯ ಯಜಮಾನಿಗು ತಿಂಗಳಿಗೆ 2000 ರೂ ಹಣ ಸಿಗುತ್ತದೆ. ಆದರೆ ಈಗ ಕೆಲವು ಮಹಿಳೆಯರಿಗೆ ಇನ್ನು ಮುಂದೆ ಗೃಹಲಕ್ಷ್ಮಿ ಹಣವನ್ನು ನೀಡದಿರಲು ಸರ್ಕಾರ ತೀರ್ಮಾನಿಸಿದೆ.

 

ಹೌದು, ಸರ್ಕಾರದ ನಿಯಮಗಳನ್ನು ಮೀರಿ ರೇಷನ್‌ ಕಾರ್ಡ್‌ ಪಡೆದವರ ಪಡಿತರ ಚೀಟಿ ರದ್ದುಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಈ ರೀತಿ ಬಿಪಿಎಲ್‌ ಕಾರ್ಡ್‌ ರದ್ದಾದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಸೇರಿದಂತೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಸಿಗುವುದಿಲ್ಲ.

 

ಅಲ್ಲದೆ ಒಂದು ವೇಳೆ ತಪ್ಪಾಗಿ ನಿಮ್ಮ ಕಾರ್ಡ್‌ ರದ್ದಾದರೆ ನೀವು ಆಹಾರ ಇಲಾಖೆಗೆ ತೆರಳಿ ಸೂಕ್ತ ದಾಖಲೆ ನೀಡಿ ಮರು ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ.

Comments are closed.