Rajat Kumar: ರಿಷಬ್‌ ಪಂತ್‌ ಪ್ರಾಣ ಉಳಿಸಿದ ವ್ಯಕ್ತಿ ಆತ್ಮಹತ್ಯೆಗೆ ಯತ್ನ

Rajat Kumar: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಡಿಸೆಂಬರ್ 2022 ರಲ್ಲಿ ಭೀಕರ ಕಾರು ಅಪಘಾತ ಉಂಟಾಗಿತ್ತು. ಅಪಘಾತದ ನಂತರ ಇಬ್ಬರು ಯುವಕರು ಪಂತ್ ಅವರನ್ನು ಅವರ ವಾಹನದಿಂದ ಹೊರತೆಗೆದು, ಅವರ ಜೀವವನ್ನು ಉಳಿಸಿರುವ ಘಟನೆ ರಾಷ್ಟ್ರದಾದ್ಯಂತ ಸುದ್ದಿಯಾಗಿತ್ತು. ಆ ಇಬ್ಬರು ಯುವಕರು ರಜತ್ ಕುಮಾರ್ ಮತ್ತು ನಿಶು ಕುಮಾರ್. ಇದೀಗ ಪಂತ್ ಪ್ರಾಣ ಉಳಿಸಿದ ರಜತ್ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಘಟನೆ ನಡೆದಿದೆ.

ಮಾಧ್ಯಮ ವರದಿಗಳ ಪ್ರಕಾರ, ರಜತ್ ಮತ್ತು ಆತನ ಗೆಳತಿ ಒಟ್ಟಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ರಜತ್ ಗೆಳತಿ ಸಾವನ್ನಪ್ಪಿದ್ದು, ರಜತ್ ಸ್ಥಿತಿ ಚಿಂತಾಜನಕವಾಗಿದೆ. ಮುಜಾಫರ್‌ನಗರದ ಬುಚ್ಚಾ ಬಸ್ತಿ ನಿವಾಸಿ ರಜತ್ ಮತ್ತು ಅವರ ಗೆಳತಿ ಸುಮಾರು 5 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇಬ್ಬರೂ ಬೇರೆ ಬೇರೆ ಜಾತಿಗೆ ಸೇರಿದವರಾಗಿದ್ದಾರೆ. ಈ ಕಾರಣದಿಂದ ಅವರ ಕುಟುಂಬ ಸದಸ್ಯರು ಇವರ ಸಂಬಂಧವನ್ನು ನಿರಾಕರಿಸಿದ್ದಾರೆ. ಇದರಿಂದ ನೊಂದ 25 ವರ್ಷದ ರಜತ್ ಮತ್ತು ಆತನ 21 ವರ್ಷದ ಆತನ ಪ್ರೇಯಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ಆತನ ಗೆಳತಿ ಸಾವನ್ನಪ್ಪಿದ್ದಾಳೆ, ಆದರೆ ರಜತ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

Comments are closed.