Tirupati : ವಾಟ್ಸಾಪ್‌ನಲ್ಲೇ ತಿರುಪತಿ ದರ್ಶನ ಟಿಕೆಟ್ ಬುಕಿಂಗ್ ಮಾಡಿ !!

Share the Article

Tirupati : ತಿರುಪತಿ ತಿಮ್ಮಪ್ಪನ ಇದೀಗ ಭಕ್ತರ ಅನುಕೂಲಕ್ಕಾಗಿ ಆಂಧ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಈ ಮೂಲಕ ಇನ್ಮುಂದೆ ಭಕ್ತರು ಬಹಳ ಸುಲಭದಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು.

ಹೌದು, ಆಂಧ್ರ ಸರ್ಕಾರ ವಾಟ್ಸಾಪ್ ಮೂಲಕ ಸರ್ಕಾರಿ ಸೇವೆಗಳನ್ನು ‘ಮನ ಮಿತ್ರ’ದಡಿಯಲ್ಲಿ ಚಾಲೂ ಮಾಡಿದೆ. ಹೀಗಾಗಿ ಟಿಟಿಡಿ ಸೇವೆಗಳು ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು ಟಿಕೆಟ್, ರೂಂ ಬುಕಿಂಗ್, ದೇಣಿಗೆ ಸೇರಿದಂತೆ ಹಲವು ಸೇವೆಗಳು ಲಭ್ಯವಾಗಲಿವೆ.

ಹೇಗೆ ಬುಕ್ ಮಾಡುವುದು?

* 9552300009ಕ್ಕೆ ‘ಹಾಯ್’ ಎಂದು ಮೆಸೇಜ್ ಮಾಡಿ. ಆಪ್ಶನ್‌ನಲ್ಲಿ ಟೆಂಪಲ್ ಬುಕಿಂಗ್ ಸರ್ವೀಸಸ್ ಆಯ್ಕೆ ಮಾಡಿ. ಚಾಟ್‌ಬಾಟ್ ಮಾಹಿತಿ ನೀಡುತ್ತದೆ.

* ಪಾವತಿಯ ನಂತರ ಟಿಕೆಟ್ ನಿಮ್ಮ ವಾಟ್ಸಾಪ್ ನಂಬರ್‌ಗೆ ಬರುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು ಹೋಗಬಹುದು.

Comments are closed.