World record: ವಿಶ್ವದಾಖಲೆ ಮಾಡಿದ ವಿಜಯಪುರದ 9 ತಿಂಗಳ ಹಾಲುಗಲ್ಲಿನ ಹೆಣ್ಣು ಮಗು

World record: ವಿಜಯಪುರದ 9 ತಿಂಗಳ ಬಾಲೆ 422 ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆ (World record) ನಿರ್ಮಿಸಿದ್ದಾಳೆ. ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಹಾಗೂ ಜಿಲ್ಲಾಡಳಿತ ಪುಟ್ಟ ಪೋರಿ ಸಾಧನೆ ಕಂಡು ಸನ್ಮಾನಿಸಿದ್ದಾರೆ.

ಹೌದು, ವಿಜಯಪುರ ನಗರದ 9 ತಿಂಗಳ ಪೋರಿ ಐರಾ, ನಗರದ ಪಾಟೀಲ್ ಪ್ಲಾನೇಟ್ ಅಪಾರ್ಟಮೆಂಟ್ ವಾಸಿಯಾಗಿರೋ ದೀಪ್ ಹಾಗೂ ಅನುಷಾ ದಂಪತಿಯ ಪುತ್ರಿ.

ಐರಾಳಿಗೆ ಮನೆಯೇ ಮೊದಲ ಪಾಠ ಶಾಲೆ ತಾಯಿಯೇ ಗುರು ಎಂಬಂತೆ ಈ ಸಾಧನೆಗೆ ಕಾರಣವಾಗಿದೆ. ಹುಟ್ಟಿದ ಕೆಲ ವಾರಗಳಲ್ಲೇ ಎಲ್ಲವನ್ನೂ ಗುರುತು ಹಿಡಿಯೋದನ್ನು ರಿಯಾಕ್ಟ್ ಮಾಡೋದನ್ನ ಗಮನಿಸಿದ ಅನುಷಾ ತನ್ನ ಮಗಳಿಗೆ ಏನೋ ವಿಶೇಷ ಸಾಮರ್ಥ್ಯವಿದೆ ಎಂದು ಮನಗಂಡಿದ್ದರು. ಐರಾಳ ಬುದ್ದಿಮತ್ತೆ, ನೆನಪಿಶ ಶಕ್ತಿ, ಗ್ರಹಣ ಶಕ್ತಿಗಳನ್ನು ಗುರುತಿಸಿ ಐರಾಗೆ ಪೂರಕವಾಗಿ ಕಲಿಕೆ ಮಾಡಿಸುತ್ತಾ, ಕಲಿಕೆ ಜೊತೆಗೆ ತರಬೇತಿಯನ್ನು ನೀಡ ತೊಡಗಿದರು.
ಐರಾಗೆ 9 ತಿಂಗಳು ಆಗಿದ್ದ ವೇಳೆ26 ಇಂಗ್ಲೀಷ್ ವರ್ಣಮಾಲೆಗಳು, 24 ಹಣ್ಣುಗಳು, 20 ಸಾಕು ಪ್ರಾಣಿಗಳು, 24 ಸಾರಿಗೆ ವಿಧಾನಗಳು, 24 ದೇಹದ ಭಾಗಗಳು, 24 ತರಕಾರಿಗಳು, 24 ಪಕ್ಷಿಗಳು, 13 ಆಕಾರಗಳು, 11 ಬಣ್ಣಗಳು, 24 ಸಂಖ್ಯೆಗಳು, 48 ಏಷ್ಯನ್ ದೇಶಗಳ ಧ್ವಜಗಳು, 28 ಸ್ವಾತಂತ್ರ್ಯ ಹೋರಾಟಗಾರರು, 24 ಹೂವುಗಳು, 24 ಕಾರ್ಯಗಳು, 12 ಸಮುದ್ರ ಜೀವಿಗಳು, 12 ಸಮುದಾಯ ಕಾರ್ಯಕರ್ತರು, 12 ವೃತ್ತಿಪರರು, 12 ಭಾರತದ ಪ್ರಸಿದ್ಧ ಸ್ಥಳಗಳು, 12 ಮನೆಯಲ್ಲಿರುವ ವಸ್ತುಗಳು, 24 ಕಾಡು ಪ್ರಾಣಿಗಳನ್ನು ಐರಾ ಗುರುತಿಸುತ್ತಾಳೆ. ಈ ಮೂಲಕ ಪುಟ್ಟ ಬಾಲೆ ಒಟ್ಟು 422 ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ಧಾಳೆ.

ಪುಟ್ಟ ಬಾಲೆ ಐರಾಗೆ ಯಂಗೆಸ್ಟ್ ಚೈಲ್ಡ್ ಟು ಐಡೆಂಟಿಫೈ ದಿ ಮೋಸ್ಟ್ ನಂಬರ್ ಆಫ್ ಐಟಮ್ಸ್ ಆಟ್ ದಿ ಏಜ್ ಆಫ್ 9 ಮಂಥ್ಸ್ ಸರ್ಟಿಫಿಕೇಟ್ ನೀಡಿದೆ. ಅಂತೆಯೇ ದೀಪಕ ಹಾಗೂ ಅನುಷಾ ತಮ್ಮ ಮಗಳು ಐರಾ ನೊಬೆಲ್ ವರ್ಲ್ಡ್ ರೆಕಾರ್ಡ್ ಮಾಡಿದ್ದರ ಕುರಿತು ಸಿಎಂ ಸಿದ್ಧರಾಮಯ್ಯ ಅವರಿಗೆ ಮೇಲ್ ಮೂಲಕ ಮಾಹಿತಿ ನೀಡಿದ್ದರು. ಅದನ್ನು ಗಮನಿಸಿ ಸಿಎಂ ಕರೆ ಮಾಡಿ, ಬೆಳಗಾವಿಯ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬೆಳಗಾವಿಗೆ ಕರೆದು, ಸ್ವತಃ ಸಿಎಂ ಭೇಟಿಯಾಗಿದ್ದಾರೆ. ಮಗುವಿನ ಪ್ರತಿಭೆ ಕಂಡು ಆಕೆಗೆ ಸನ್ಮಾನಿಸಿ ಶುಭ ಹಾರೈಸಿದ್ದಾರೆ. ಸದ್ಯ 1 ವರ್ಷ ಒಂದು ವಾರ ಪ್ರಾಯದ ಪೋರಿ ಇದೀಗಾ 700 ವಿವಿಧ ಬಗೆಯ ಕಾರ್ಡ್ ಗಳನ್ನು ಗುರುತಿಸುತ್ತಾಳೆ. ಮುಂದೆ ಐರಾಳಿಗೆ ಗಣಿತ ವಿಷಯದಲ್ಲಿ ತರಬೇತಿಯನ್ನು ನೀಡಲು ಅನುಷಾ ನಿರ್ಧಾರ ಮಾಡಿದ್ದಾರೆ.

Comments are closed.