Thawar Chand Gehlot: ಸರಕಾರದ ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆಗೆ ಅಂಕಿತ ಹಾಕದ ರಾಜ್ಯಪಾಲರು!

Share the Article

Thawar Chand Gehlot: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ ಕಂಪನಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕದೆ ಹಲವು ಸ್ಪಷ್ಟನೆಯನ್ನು ಕೇಳಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ವಾಪಸು ಕಳುಹಿಸಿದ್ದಾರೆ.

 

ಈ ಸುಗ್ರೀವಾಜ್ಞೆಯಲ್ಲಿ ಸಾಲ ಪಡೆದವರ ರಕ್ಷಣೆಗೆ ಮಾತ್ರ ಗಮನ ನೀಡಲಾಗಿದೆ. ಸಹಜ ನ್ಯಾಯದ ಅಡಿಯಲ್ಲಿ ಸಾಲ ನೀಡಿದವರಿಗೆ ರಕ್ಷಣೆ ಇಲ್ಲ. ಸುದೀರ್ಘ ಅವಧಿಯಲ್ಲಿ ಇದು ಮಾರಕವಾಗಲಿದೆ. ಸಾಲ ಪಡೆಯುವವನ ಬಳಿ ದಾಖಲೆ ತೆಗೆದುಕೊಳ್ಳಬಾರದು ಎಂದಿದ್ದೀರಿ. ಇದರಿಂದ ಸರಕಾರ ಸಂಸ್ಥೆಗಳ ಸಾಲದ ವೇಳೆ ಇದೇ ಪರಿಸ್ಥಿತಿ ಬರಬಹುದು. ಶಿಕೆ ಪ್ರಮಾಣ ಹತ್ತು ವರ್ಷ ವಿಧಿಸಲಾಗಿದೆ. ಇದರಲ್ಲಿ ಯಾವುದೇ ಲಾಜಿಕ್‌ ಇಲ್ಲ. ಪ್ರಾಮಾಣಿಕವಾಗಿ ಸಾಲ ಕೊಟ್ಟವರಿಗೂ ಇದು ಎಫೆಕ್ಟ್‌ ಆಗುತ್ತಿದೆ. ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವವರಿಗೂ ಇದು ಸಮಸ್ಯೆ ಬಜೆಟ್‌ ಅಧಿವೇಶನ ಹತ್ತಿರವಿದ್ದು, ಸದನದಲ್ಲಿ ಚರ್ಚಿಸಿ ಎಂದು ಗೆಹ್ಲೋಟ್‌ ರಾಜ್ಯಸರಕಾರಕ್ಕೆ ಹೇಳಿ ಸುಗ್ರೀವಾಜ್ಞೆಯನ್ನು ವಾಪಾಸು ಕಳಿಸಿದ್ದಾರೆ.

Comments are closed.