Viral Video : ಆನೆ ಮತ್ತು ಜೆಸಿಬಿ ನಡುವೆ ಬಿಗ್ ಫೈಟ್ – ಗೆದ್ದಿದ್ದು ಯಾರು?

Viral Video : ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ವೈರಲ್ ಆಗುವ ವಿಡಿಯೋಗಳು ನಿಜಕ್ಕೂ ರೋಮಾಂಚನಗೊಳಿಸುತ್ತವೆ. ಅಂತೆಯೇ ಇದೀಗ ವೈರಲ್ ಆದ ವಿಡಿಯೋವನ್ನು ನೋಡಿದರೆ ಅಚ್ಚರಿ, ರೋಮಾಂಚನ, ಕುತೂಹಲ ಎಲ್ಲವೂ ಆಗುತ್ತದೆ. ಯಾಕೆಂದರೆ ಈ ವಿಡಿಯೋದಲ್ಲಿ ಇರುವುದು ಗಜರಾಜ ಆನೆ ಮತ್ತು ಜೆಸಿಬಿಯ ಫೈಟಿಂಗ್!!

ಹೌದು, ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಆನೆಯೊಂದು ಜೆಸಿಬಿ ಯಂತ್ರದ ಮೇಲೆ ದಾಳಿ ಮಾಡಿದ ಘಟನೆ ನಡೆದಿದೆ. ಫೆ.1ರಂದು ಈ ಘಟನೆ ನಡೆದಿದ್ದು, ಕಾಡಾನೆಯೊಂದನ್ನು ಓಡಿಸಲು ವ್ಯಕ್ತಿಯೊಬ್ಬ ಜೆಸಿಬಿ ಯಂತ್ರವನ್ನು ಬಳಸಿದ್ದಾನೆ. ಇದರಿಂದ ಕೋಪಗೊಂಡ ಆನೆ ಜೆಸಿಬಿಯ ಮೇಲೆ ಪ್ರತಿದಾಳಿ ಮಾಡಿದೆ. ಈ ದಾಳಿಯಲ್ಲಿ ಆನೆ ಒಮ್ಮೆಲೇ ಜೆಸಿಪಿಯ ಮೇಲೆ ನುಗ್ಗಿ ಅದನ್ನು ಎತ್ತಿ ಬಿಸಾಡಲು ಮುಂದಾಗಿದೆ. ಆನೆಯೂ ಕೊಂಚ ಬಲ ಹಾಕಿದ್ದರೂ ಕೂಡ ಜೆಸಿಪಿ ಉರುಳಿ ಉರುಳಿ ಬಿದ್ದು ಪಲ್ಟಿ ಆಗುತ್ತಿದ್ದಂತೂ ಪಕ್ಕ. ಒಟ್ಟಿನಲ್ಲಿ ಈ ಗಜರಾಜ ಮತ್ತು ಜೆಸಿಬಿಯ ಫೈಟಿಂಗ್ ನೋಡಿ ನೆಟ್ಟಿದರೆ ಶಾಕ್ ಆಗಿದ್ದಾರೆ.

 

ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯೊಂದು ಜೋರಾಗಿ ಜೆಸಿಬಿ ವಾಹನಕ್ಕೆ ಡಿಕ್ಕಿ ಹೊಡೆದಿರೋದನ್ನು ಗಮನಿಸಬಹುದು. ಆನೆ ತಮ್ಮ ಸಮೀಪ ಬರುತ್ತಿರೋದನ್ನು ಗಮನಿಸಿದ ಚಾಲಕ ಜೆಸಿಬಿ ವಾಹನದ ಮುಂಭಾಗವನ್ನು ಮೇಲೆ ಮಾಡುತ್ತಾನೆ. ಆನೆಯೂ ಸಹ ತನ್ನ ಸೊಂಡಿಲಿನಿಂದ ಬಲವಾಗಿಯೇ ದಾಳಿ ಮಾಡುತ್ತದೆ. ಆನೆಯ ಪ್ರಬಲ ದಾಳಿಯಿಂದ ಇಡೀ ಜೆಸಿಬಿ ಅಲುಗಾಡುತ್ತದೆ. ಆನೆಯ ತಳ್ಳುವಿಕೆಯಿಂದ ಜೆಸಿಬಿ ಮೇಲೆ ಹೋಗುತ್ತಿದ್ದಂತೆ ಸುತ್ತಲೂ ಧೂಳು ಉಂಟಾಗುತ್ತದೆ. ಇದಾದ ಬಳಿಕ ಆನೆ ಹಿಂದಕ್ಕೆ ಹೋಗುತ್ತದೆ. ನಂತರ ತನ್ನಪಾಡಿಗೆ ತಾನು ಹೋಗಲಾರಂಭಿಸುತ್ತದೆ. ಆದ್ರೆ ಚಾಲಕ ಇಷ್ಟಕ್ಕೆ ಸುಮ್ಮನಾಗದೇ ಆನೆಯನ್ನು ಹಿಮ್ಮೆಟ್ಟಿಸಿಕೊಂಡು ಹೋಗುತ್ತಾನೆ. ಈ ವಿಡಿಯೋದಲ್ಲಿ ಕಾಣುವ ನಾಲ್ಕೈದು ಜನರು, ಜೋರಾಗಿ ಧ್ವನಿ ಮಾಡುತ್ತಾ ಆನೆಯ ಹಿಂದೆ ಓಡುತ್ತಾರೆ.

 

ಸದ್ಯ ಆನೆ ತನ್ನ ಸೊಂಡಿಲಿನಿಂದ ಜೆಸಿಬಿಯನ್ನು ಎತ್ತುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(ViralVideo)ಆಗಿದೆ. ಪ್ರಾಣಿಯನ್ನು ಪ್ರಚೋದಿಸಿದ್ದಕ್ಕೆ ಮತ್ತು ಯಂತ್ರದಿಂದ ಅದರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮಾಲ್‍ಬಜಾರ್‌ನಲ್ಲಿ ಆ ವ್ಯಕ್ತಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯ ವೇಳೆ ಆನೆಯ ಹಣೆ ಮತ್ತು ಸೊಂಡಿಲಿಗೆ ಗಾಯವಾಗಿದೆಯಂತೆ.

Comments are closed.