Salman Khan: ಫಾರ್ಮ್ ಹೌಸ್ ಬಳಿ ಸಲ್ಮಾನ್ ಖಾನ್‌ಗೆ ದಾಳಿ ಮಾಡಿದ ಆರೋಪಿಗಳಿಗೆ ಜಾಮೀನು

Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಫಾರ್ಮ್‌ಹೌಸ್‌ನಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ ಬಂಧಿತರಾಗಿರುವ ಇಬ್ಬರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸಂಚು ರೂಪಿಸಿದ ಮತ್ತು ವಾಟ್ಸಾಪ್ ಗ್ರೂಪ್‌ನಲ್ಲಿ ಆರೋಪಿಗಳ ಉಪಸ್ಥಿತಿಯನ್ನು ಹೊರತುಪಡಿಸಿ, ಅವರ ವಿರುದ್ಧ ಯಾವುದೇ ನಿರ್ದಿಷ್ಟ ಸಾಕ್ಷ್ಯಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆರೋಪಿಗಳಾದ ವಾಸ್ಪಿ ಮಹಮೂದ್ ಖಾನ್ ಅಲಿಯಾಸ್ ವಾಸಿಂ ಚಿಕ್ನಾ ಮತ್ತು ಗೌರವ್ ವಿನೋದ್ ಭಾಟಿಯಾ ಅಲಿಯಾಸ್ ಸಂದೀಪ್ ಬಿಷ್ಣೋಯ್ ಅವರನ್ನು ಪೊಲೀಸರು ಬಂಧನವಾಗಿತ್ತು

ನ್ಯಾಯಾಲಯದಲ್ಲಿ, ಪ್ರತಿವಾದಿ ವಕೀಲರಾದ ತನ್ವೀರ್ ಅಜೀಜ್ ಪಟೇಲ್ ಮತ್ತು ಅಸಿತ್ ಯಶವಂತ್ ಚಾವ್ರೆ ಅವರು ವಾಟ್ಸಾಪ್ ಗುಂಪಿನಲ್ಲಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಆರೋಪಿಗಳಾಗಿ ಪರಿಗಣಿಸಲಾಗುವುದಿಲ್ಲ ಎಂದು ವಾದಿಸಿದರು.

Comments are closed.