Mangaluru: ಪ್ರಸಾದ್‌ ಅತ್ತಾವರ ಜಾಮೀನು ಅರ್ಜಿ ಇಂದು ನಿರ್ಧಾರ

Mangaluru: ಬಿಜೈಯ ಯುನಿಸೆಕ್ಸ್‌ ಸೆಲೂನ್‌ನಲ್ಲಿ ಗಲಾಟೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಸಾದ್‌ ಅತ್ತಾವರ ಹಾಗೂ ಇತರ ಕಾರ್ಯಕರ್ತರ ಜಾಮೀನು ಅರ್ಜಿ ಆದೇಶ ಇಂದು ಫೆ.5 ರಂದು ಪ್ರಕಟಗೊಳ್ಳಲಿದೆ.

ಜಾಮೀನು ಅರ್ಜಿಯ ವಿಚಾರಣೆ ಶನಿವಾರ ನ್ಯಾಯಾಲಯದಲ್ಲಿ ನಡೆದಿತ್ತು. ನ್ಯಾಯಾಧೀಶರು ಆದೇಶವನ್ನು ಮಂಗಳವಾರಕ್ಕೆ ಮುಂದೂಡಿದ್ದರು. ಬುಧವಾರ (ಇಂದು) ಆದೇಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

Comments are closed.