BJP MLA: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಿಜೆಪಿ ಶಾಸಕ ನಿಧನ !!

Share the Article

BJP MLA: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗುಜರಾತ್ ಬಿಜೆಪಿ ಶಾಸಕ ಕರ್ಶಣ್‌ಭಾಯ್ ಸೋಲಂಕಿ ನಿಧನರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿದ್ದು ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮೃತರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ಕಾಡಿ ತಾಲ್ಲೂಕಿನ ನಾಗರಸನ್‌ನಲ್ಲಿ ಮಧ್ಯಾಹ್ನದ ಬಳಿಕ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ.

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲಾಗಿರುವ ಕಾಡಿ ವಿಧಾನಸಭಾ ಕೇತ್ರದಿಂದ 2017 ಹಾಗೂ 2022ರಲ್ಲಿ ಸೋಲಂಕಿ ಗೆಲುವು ಸಾಧಿಸಿದ್ದರು. ಸೋಲಂಕಿ ಅವರ ನಿಧನಕ್ಕೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ಸೂಚಿಸಿದ್ದಾರೆ.

Comments are closed.