Monalisa : ಬಾಲಿವುಡ್ ಗೆ ಕಾಲಿಟ್ಟ ಮೊನಾಲಿಸಾ – ಮೊದಲ ಸಿನಿಮಾಕ್ಕೆ ಪಡೆದ ಸಂಭಾವನೆ ಕೇಳಿದ್ರೆ ಬೆರಗಾಗುತ್ತೀರಾ?

Monalisa: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿರುವ ಕೋಟ್ಯಂತರ ಮಂದಿಯ ನಡುವೆ, ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿ ಮೊನಾಲಿಸಾ ಎಲ್ಲರನ್ನು ತನ್ನತ್ತ ಸೆಳೆಯುವ ಮೂಲಕ ರಾತ್ರೋ ರಾತ್ರಿ ಇಡೀ ದೇಶದ ಗಮನ ಸೆಳೆದಿದ್ದಳು. ಸೋಷಿಯಲ್‌ ಮೀಡಿಯಾಗಳಲ್ಲಿ ಈಕೆಯದ್ದೇ ಕಾರುಬಾರು. ಕುಂಭಮೇಳ ಎಂದರೆ ಮೊನಾಲಿಸಾ ಎನ್ನುವಷ್ಟರ ಮಟ್ಟಿಗೆ ಈಕೆ ಸದ್ದು ಮಾಡುತ್ತಿದ್ದಾಳೆ. ಮೊನಾಲಿಸಾಳಿಗೆ ಸಿನಿಮಾಗಳ ಆಫರ್‌ ಕೂಡ ಬರುತ್ತಿವೆ.

ಹೌದು, ನಿರ್ದೇಶಕ ಸನೋಜ್ ಮಿಶ್ರಾ ಅವರ ‘ದಿ ಡೈರಿ ಆಫ್ ಮಣಿಪುರ’ದಲ್ಲಿ ಚೆಲುವೆ ಮೊನಾಲಿಸಾ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೆ ಅಧಿಕೃತ ಒಪ್ಪಿಗೆ ಸಿಕ್ಕಿದ್ದು, ಸಹಿ ಹಾಕಲಾಗಿದೆ. ಬಾಲಿವುಡ್​ ನಟ ರಾಜ್‌ಕುಮಾರ್ ರಾವ್ ಅವರ ಸಹೋದರನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ ನಟ ರಾಜ್‌ಕುಮಾರ್ ರಾವ್ ಸಹೋದರ ಅಮಿತ್ ರಾವ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸನೋಜ್ ಮಿಶ್ರಾ ನಿರ್ದೇಶಿಸುತ್ತಿದ್ದಾರೆ. ನಾಯಕಿಯಾಗಿ ಮೊನಾಲಿಸಾ ಭೋಸ್ಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ವೈರಲ್ ವಿಡಿಯೋದಿಂದ ಏಕಾಏಕಿ ಬಾಲಿವುಡ್ ಆಫರ್ ಪಡೆದ ಖ್ಯಾತಿಗೂ ಪಾತ್ರರಾಗಿದ್ದಾಳೆ.

ಸಿಕ್ಕ ಸಂಭಾವನೆ ಎಷ್ಟು?

ಮಾಧ್ಯಮ ವರದಿಗಳ ಪ್ರಕಾರ, ಮೋನಾಲಿಸಾ ಅವರಿಗೆ ಈ ಚಿತ್ರಕ್ಕೆ 21 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎನ್ನಲಾಗುತ್ತಿದೆ. ಮಹಾಕುಂಭ ಮತ್ತು ಇತರ ಸ್ಥಳಗಳಲ್ಲಿ ರುದ್ರಾಕ್ಷ ಮಾಲೆ ಮಾರುತ್ತಿದ್ದ ಸರಳ ಹುಡುಗಿ ಈಗ ತನ್ನ ಮೊದಲ ಚಿತ್ರದ ಮೂಲಕ ಬಾಲಿವುಡ್‌ಗೆ ಭರ್ಜರಿ ಪ್ರವೇಶ ಮಾಡಲಿದ್ದಾರೆ. ಅಭಿಮಾನಿಗಳು ಅವರ ಚೊಚ್ಚಲ ಚಿತ್ರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

Comments are closed.