Udupi : ಕರುವಿನ ಬಾಲ ಕತ್ತರಿಸಿ ವಿಕೃತಿ ಮೆರೆದ ಸೇಲ್ಸ್ ಮ್ಯಾನ್ !!

Udupi : ಕರ್ನಾಟಕದಲ್ಲಿ ಜಾನುವಾರುಗಳ ಮೇಲಿನ ಹಿಂಸಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಗರ್ಭ ಧರಿಸಿದ್ದ ಹಸುವನ್ನು ಕದ್ದು ಕೊಂಡೊಯ್ದು ಕೊಲೆ ಮಾಡಿ ಮಾಂಸ ಮಾರಾಟ ಮಾಡಿದ ಘಟನೆಯ ನೆನಪು ಮಾಸುವ ಮುನ್ನವೇ ಇದೀಗ ಉಡುಪಿ ಜಿಲ್ಲೆಯಲ್ಲಿಯೂ ಕರುವಿನ ಬಾಲ ಕತ್ತರಿಸಿದ ಘಟನೆ ನಡೆದಿದೆ.
ಹೌದು, ಉಡುಪಿ(Udupi) ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಸೇಲ್ಸ್ಮ್ಯಾನ್ ಸೋಗಿನಲ್ಲಿ ಬಂದು ಕರುವಿನ ಬಾಲ ಕತ್ತರಿಸಿದ್ದಾನೆ. ಗುಂಡ್ಮಿಯಲ್ಲಿ ಮಯ್ಯ ಕುಟುಂಬದ ಮನೆಯೊಂದಕ್ಕೆ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದಿದ್ದ ದುರುಳ, ಮನೆಯವರನ್ನು ಕರೆದು ವಸ್ತುಗಳನ್ನು ತೋರಿಸಿದ್ದಾನೆ. ವಸ್ತುಗಳ ಖರೀದಿಗೆ ನಿರಾಕರಿಸಿ ಮಹಿಳೆ ಮನೆ ಬಾಗಿಲು ಹಾಕಿದ್ದಾರೆ. ಆ ಬಳಿಕ ಮನೆ ಬಳಿಯೇ ಇದ್ದ 2 ವರ್ಷದ ಕರುವಿನ ಬಾಲ ಕತ್ತರಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ.
ಘಟನೆಯನ್ನು ಹಿಂದೂ ಸಂಘಟನೆಗಳು ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿವೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Comments are closed.