Fish: ಮೀನು ಕ್ಲೀನ್ ಮಾಡಿದ ನೀರನ್ನು ಬಿಸಾಡುತ್ತೀರಾ? ಈ ರೀತಿ ಬಳಸಿ, ಅಧಿಕ ಲಾಭಗಳಿಸಿ

Fish: ಮಾಂಸಾಹಾರಿಗಳಲ್ಲಿ ಹಲವರಿಗೆ ಮೀನು ಎಂದರೆ ಬಲು ಪ್ರೀತಿ. ಮೀನಿನಲ್ಲಿ ತಯಾರಿಸಿದ ಖಾದ್ಯಗಳನ್ನು ಚಪ್ಪರಿಸಿ ತಿನ್ನುತ್ತಾರೆ. ಅಂದ ಹಾಗೆ ಮೀನನ್ನು ಕೊಳ್ಳುವಾಗ ಕೆಲವರು ಮಾರುಕಟ್ಟೆಯಲ್ಲಿ ಕ್ಲೀನ್ ಮಾಡಿದೆ ತಂದರೆ ಇನ್ನು ಕೆಲವರು ನೇರವಾಗಿ ಮನೆಗೆ ತಂದು ತಾವೇ ಕ್ಲೀನ್ ಮಾಡಿಕೊಳ್ಳುತ್ತಾರೆ. ಅಥವಾ ಮನೆ ಮುಂದೆ ಮೀನು ಮಾರಲು ಬಂದವರ ಬಳಿ ಕೊಂಡುಕೊಂಡಾಗ ಮನೆಯಲ್ಲಿ ಕ್ಲೀನ್ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಹೀಗೆ ಮನೆಯಲ್ಲಿ ಮೀನು ಕ್ಲೀನ್ ಮಾಡಿದ ನೀರನ್ನು ಎಲ್ಲರೂ ಬಿಸಾಡುತ್ತಾರೆ. ಆದರೆ ತಪ್ಪಿಯು ಇನ್ನು ಮುಂದೆ ಈ ರೀತಿ ಮಾಡಬೇಡಿ. ಯಾಕೆಂದರೆ ಈ ನೀರನ್ನು ಬಳಸಿ ಅಧಿಕ ಲಾಭಗಳಿಸಬಹುದು. ಇಲ್ಲಿದೆ ನೋಡಿ ಡೀಟೇಲ್ಸ್.

ಹೌದು, ಮೀನನ್ನು ಕ್ಲೀನ್ ಮಾಡುವ ನೀರನ್ನು ಅಪ್ಪಿ ತಪ್ಪಿಯು ಬಿಸಾಡಬೇಡಿ. ಯಾಕೆಂದರೆ ಇದರಿಂದ ಅಧಿಕ ಲಾಭ ಗಳಿಸಬಹುದು. ಹೇಗೆ ಗೊತ್ತಾ? ನೀವು ಮನೆಯಲ್ಲಿ ಯಾವುದಾದರು ಗಿಡಗಳನ್ನು ನೆಟ್ಟಿದ್ದರೆ ಅಥವಾ ಚಿಕ್ಕ ಫ್ಲಾಟ್ ಅನ್ನು ಮಾಡಿದ್ದರೆ ಅದಕ್ಕೆ ಬಳಸಿಕೊಳ್ಳುವ ಮೂಲಕ ದುಪಟ್ಟು ಲಾಭ ಗಳಿಸಬಹುದು.

ಮೀನು ತೊಳೆದ ನೀರಿನಿಂದ ಲಾಭ ಹೇಗೆ?
ಮೀನನ್ನು ಕ್ಲೀನ್ ಮಾಡಿದ ನೀರನ್ನು ನಿಮ್ಮ ಮನೆಯ ಹೂವಿನ ಗಿಡಗಳಿಗೆ ಅಥವಾ ತಾವು ಬೆಳೆದ ಸಸ್ಯಗಳಿಗೆ ಹಾಕಿ. ಮೀನಿನ ತಲೆ ಮತ್ತು ಇತರ ತ್ಯಾಜ್ಯಗಳು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಹೀಗಾಗಿ ಉತ್ತಮವಾದ ಬೆಳವಣಿಗೆಯ ಸಸ್ಯಗಳು ನಿಮ್ಮದಾಗುತ್ತದೆ. ಅಲ್ಲದೆ ಮೀನಿನ ತ್ಯಾಜ್ಯವನ್ನು ಸಸ್ಯದ ಕುಂಡ ಅಥವಾ ಬೆಳೆಯುವ ಚೀಲದಲ್ಲಿ ಹೂತುಹಾಕಿ. ಇದಾದ ನಂತರ ಅದರ ಮೇಲೆ ತರಕಾರಿ ಸಸ್ಯಗಳು ಅಥವಾ ಹೂವುಗಳನ್ನು ನೆಡುವುದು ಉತ್ತಮ. ಇದು ಸಸ್ಯವು ವೇಗವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇಷ್ಟೇ ಅಲ್ಲದೆ ನೆಟ್ಟ ಸಸ್ಯಗಳ ನಡುವೆ ಮೀನನ್ನು ತೊಳೆದ ನೀರನ್ನು ಸುರಿಯಿರಿ. ಬೇರುಗಳನ್ನು ಮುರಿಯದೆ ಸಸ್ಯದ ಬುಡದ ಸುತ್ತ ಸ್ವಲ್ಪ ಮಣ್ಣನು ಅಗೆದು, ನೀರನ್ನು ಸುರಿಯಬೇಕು. ಇದು ಸಸ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಸಸ್ಯಕ್ಕೆ ಯಾವುದೇ ರೋಗ ಬಾರದಂತೆ ತಡೆಯುತ್ತದೆ. ಮೀನು ತೊಳೆದ ನೀರಿಗೆ ಸ್ವಲ್ಪ ಬೆಲ್ಲ ಸೇರಿಸಿ ಒಂದು ದಿನ ಪಕ್ಕಕ್ಕೆ ಇರಿಸಿ. ಮರುದಿನ, ಇದಕ್ಕೆ ಎರಡು ಪಟ್ಟು ನೀರು ಸೇರಿಸಿ ತರಕಾರಿ ಗಿಡಗಳ ಬುಡದ ಕೆಳಗೆ ಸುರಿಯಿರಿ. ಹೀಗೆ ಮಾಡುವುದರಿಂದ ಸಸ್ಯ ಹಳದಿ ಬಣ್ಣಕ್ಕೆ ತಿರುಗುವುದು, ಬೆಳವಣಿಗೆ ಕುಂಠಿತವಾಗುವುದು ಮತ್ತು ಹಣ್ಣಿನ ಕೊರತೆಯಂತಹ ಸಮಸ್ಯೆಗಳು ಬಗೆಹರಿಯುತ್ತವೆ.

Comments are closed.