BJP: ಕುಂಭಮೇಳದಲ್ಲಿ ದೀರ್ಘ ಸ್ನಾನ ಮಾಡಿದರೆ ಬಡತನ ಕೊನೆಗೊಳ್ಳುತ್ತಾ? ಎಂದ ಖರ್ಗೆ!! ಬಿಜೆಪಿ ಕೊಟ್ಟ ತಿರುಗೇಟೇನು?

Share the Article

BJP: ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ಬಡತನ ದೂರವಾಗಲಿದೆಯೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಈ ಹೇಳಿಕೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ ಬಿಜೆಪಿ ಕೂಡ ಈ ಕುರಿತು ಖರ್ಗೆಗೆ ಟಾಂಗ್ ನೀಡಿದೆ.

ಹೌದು, ಗಂಗಾನದಿ ಸ್ನಾನದಿಂದ ಬಡತನವನ್ನು ಕೊನೆ ಆಗುತ್ತಾ!? ಎಂಬ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಬಿಜೆಪಿ ತಿರುಗೇಟು ಕೊಟ್ಟಿದೆ. “ಕಾಂಗ್ರೆಸ್‌ಗೆ ಸನಾತನ ಧರ್ಮವೆಂದರೆ ಅಲರ್ಜಿ. ಹಿಂದೂಗಳ ಬಗ್ಗೆ ಹೊಂದಿರುವ ದ್ವೇಷದ ಮನೊಭಾವನೆಯಾಗಿದೆ. ಪುಣ್ಯ ಸ್ನಾನದಿಂದ ಬಡತನ ನಿವಾರಣೆಯಾಗುವುದಿಲ್ಲ ಎನ್ನುವುದಾದರೆ ಇಫ್ತಾರ್‌ ಕೂಟದಲ್ಲಿ ಪಾಲ್ಗೊಳ್ಳುವುದರಿಂದ ಬಡತನ ಕೊನೆಗೊಳ್ಳುವುದೆ,” ಎಂದು ಬಿಜೆಪಿ ಖಾರವಾಗಿ ಪ್ರಶ್ನಿಸಿದೆ. ಜೊತೆಗೆ ‘ಸನಾತನ ವಿರೋಧಿ’ ಎಂದು ಬಿಜೆಪಿ ಟೀಕಿಸಿದ್ದು, ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರು ಕ್ಷಮೆಯಾಚಿಸುವಂತೆ ಆಗ್ರಹಿಸಿದೆ.

ಅಲ್ಲದೆ ಕರ್ನಾಟಕ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಈ ಬಗ್ಗೆ ಟೀಕಿಸಿದ್ದು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಗಂಗಾ ನದಿಯ ತೀರ್ಥ ಸ್ನಾನದ ಕುರಿತು ವ್ಯಂಗ್ಯದ ಮಾತುಗಳನ್ನಾಡುವ ಮೂಲಕ ಹಿಂದೂಗಳ ಧಾರ್ಮಿಕ ಶ್ರದ್ಧೆಯನ್ನು ಅವಮಾನಿಸಿದ್ದೀರಿ ಎಂದಿದ್ದಾರೆ.

ಖರ್ಗೆ ಹೇಳಿದ್ದೇನು?
ಮಧ್ಯಪ್ರದೇಶದಲ್ಲಿ ‘ಜೈ ಭೀಮ್‌, ಜೈ ಬಾಪು, ಜೈ ಸಂವಿಧಾನ’ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ”ಜನರ ನಂಬಿಕೆಯನ್ನು ನಾನು ಪ್ರಶ್ನಿಸುವುದಿಲ್ಲ. ಆದರೆ, ಕೇಂದ್ರ ಸಚಿವರು ನದಿಯಲ್ಲಿ ಪುಣ್ಯ ಸ್ನಾನ ಮಾಡಿದರೆ ಬಡತನ ನಿವಾರಣೆಯಾಗುತ್ತದೆಯೇ. ಜನರ ಹೊಟ್ಟೆ ತುಂಬುತ್ತದೆಯೆ? ನೂರಾರು ಸಮಸ್ಯೆ ಇರುವಾಗ ಬಿಜೆಪಿಗರು ನದಿಯಲ್ಲಿ ಮುಳುಗೇಳುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ,” ಎಂದು ಲೇವಡಿ ಮಾಡಿದ್ದರು.

Comments are closed.