Bigg Boss: ಬಿಗ್ ಬಾಸ್ – 11 ಗ್ರಾಂಡ್ ಫಿನಾಲೆ ; ಕಾರ್ಯಕ್ರಮ ಪ್ರಸಾರವಾಗೋ ದಿನ, ಸಮಯ ಯಾವುದು? ಎಲ್ಲಿ ವೀಕ್ಷಿಸಬಹುದು?

Bigg Boss: ಹಲವು ವಿಶೇಷತೆಗಳಿಂದ ಕೂಡಿದ್ದ ಬಿಗ್ ಬಾಸ್‌ ಕನ್ನಡ 11 ಸೀಸನ್‌ ಗ್ರ್ಯಾಂಡ್‌ ಫಿನಾಲೆಗೆ ಇನ್ನೂಂದೇ ದಿನ ಬಾಕಿಯಿದೆ ಅಷ್ಟೇ. ಈ ಸಂಚಿಕೆಯನ್ನು ನೋಡಲು ರಾಜ್ಯಾದ್ಯಂತ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಹಾಗಾದರೆ ಯಾವ್ಯಾವ ದಿನ ಎಷ್ಟು ಗಂಟೆಗೆ ಪ್ರಸಾರ ಆಗಲಿದೆ ಹಾಗೂ ಎಲ್ಲಿ ವೀಕ್ಷಣೆ ಮಾಡಬಹದು ಗೊತ್ತಾ? ಇಲ್ಲಿದೆ ನೋಡಿ ಡೀಟೇಲ್ಸ್

ಹೌದು, ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲಗೆ ಇನ್ನೂ ಒಂದು ಹೆಜ್ಜೆ ಮಾತ್ರ ಬಾಕಿ ಇದೆ. ಹನುಮಂತು, ರಜತ್‌, ತ್ರಿವಿಕ್ರಮ್‌, ಮೋಕ್ಷಿತಾ, ಉಗ್ರಂ ಮಂಜು, ಭವ್ಯಾ ಗೌಡ ಈ 6 ಮಂದಿ ಇದೀಗ ಉಳಿದುಕೊಂಡಿದ್ದು, ಇವರ ಪೈಕಿ ಕಪ್‌ ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಲು ವೀಕ್ಷಕರು ಕಾತರದಿಂದ ಕಾದು ನೋಡುತ್ತಿದ್ದಾರೆ. ಈ ಫಿನಾಲೆ ವೀಕ್ಷಣೆಯ ಕುರಿತು ಕೆಲವು ಮಾಹಿತಿಗಳು ಇಲ್ಲಿವೆ.

ಸಮಯ ದಿನಾಂಕ ಮತ್ತು ಎಲ್ಲಿ ವೀಕ್ಷಿಸಬಹುದು?
ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್‌ ಫಿನಾಲೆ ಶನಿವಾರ (ಜನವರಿ 25) ಹಾಗೂ ಭಾನುವಾರ (ಜನವರಿ 26) ನಡೆಯಲಿದೆ. ಫಿನಾಲೆ ಸಂಚಿಕೆ ಈ ಎರಡು ದಿನ ಕೂಡ ಸಂಜೆ 6 ಗಂಟೆಯಿಂದ ಪ್ರಸಾರ ಆಗಲಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಲೈವ್ ವೀಕ್ಷಣೆ ಮಾಡಬಹುದಾಗಿದೆ.

ಇನ್ನು ಬಿಗ್‌ ಬಾಸ್‌ ಕನ್ನಡ 11 ಸೀಸನ್‌ನಲ್ಲಿ ಈ ಬಾರಿ ಒಂದು ಹೊಸ ದಾಖಲೆ ಸೃಷ್ಟಿಯಾಗಿದೆ. ಇದೇ ಮೊಟ್ಟ ಮೊದಲ ಬಾರಿ ಈ ಸೀಸನ್‌ನ ಕೊನೇ ಘಟ್ಟದವರೆಗೂ ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟವರು ಬಿಗ್‌ ಬಾಸ್‌ ಮನೆಯಲ್ಲಿ ಉಳಿದುಕೊಂಡು ದಾಖಲೆ ನಿರ್ಮಿಸಿದ್ದಾರೆ. ಇವರನ್ನು ಸೇರಿದಂತೆ ಇದೀಗ ದೊಡ್ಮನೆಯಲ್ಲಿ 6 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರಿಗೆ ಬಿಗ್ ಬಾಸ್ ಸೀಸನ್ 11 ಕಿರೀಟ ಮಡಿಗೇರಲಿದೆ ಎಂಬುದು ಕುತೂಹಲ.

Comments are closed.