Lawyer Jagadish: ಲಾಯರ್ ಜಗದೀಶ್ ಗೆ ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ಥಳಿಸಿದ ಯುವಕರ ಗುಂಪು – ವಿಡಿಯೋ ವೈರಲ್!!

Lawyer Jagadish: ಬಿಗ್ ಬಾಸ್ ಗೆ ಹೋಗಿ ಬಂದ ಬಳಿಕ ಲಾಯರ್ ಜಗದೀಶ್​ ಎಂದೇ ಫೇಮಸ್ ಆಗಿರುವ ಕೆ.ಎನ್.ಜಗೀಶ್ ಗೆ ಯುವಕರ ತಂಡ ಒಂದು ನಡು ರಸ್ತೆಯಲ್ಲಿ ಹಿಗ್ಗಾಮುಗ್ಗ ತಿಳಿಸಿದೆ. ಜಗದೀಶ್ ಗೆ ಹಲ್ಲೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬಿಗ್ ಬಾಸ್ ಮನೆಯೊಳಗಿರುವಾಗಲೇ ತಮ್ಮ ಬೇಕಾಬಿಟ್ಟಿ ಮಾತುಗಳಿಂದ ಫೇಮಸ್ ಆಗಿದ್ದ ಲಾಯರ್ ಜಗದೀಶ್ ಅವರು ಹೊರಗೆ ಬಂದ ಬಳಿಕವೂ ವಿವಾದಗಳಿಂದ (Controversy) ಸದ್ದು ಮಾಡ್ತಿದ್ದರು. ಆದರೀಗ ಲಾಯರ್​ ಜಗದೀಶ್​​ಗೆ ಕೆಲ ಯುವಕರು ನಡು ರಸ್ತೆಯಲ್ಲೇ ಗೂಸಾ ಕೊಟ್ಟಿದ್ದಾರೆ.

ಹೌದು, ಯುವಕರ ಗುಂಪೊಂದು ಲಾಯರ್​ ಜಗದೀಶ್ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ನಡೆಸಿದೆ. ಮಾತಿಗೆ ಮಾತು ಬೆಳೆದು ಲಾಯರ್ ಜಗದೀಶ್​ ಕೂಡ ಯುವಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಇಬ್ಬರೂ ಶರ್ಟ್​ ಹಿಡಿದು ಬೀದಿಯಲ್ಲೇ ಗುದ್ದಾಡಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಬಿಗ್ ಬಾಸ್​ ಜಗದೀಶ್​ಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಅಂದಹಾಗೆ @Loki Navi ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಶೇರ್ ಆಗಿದ್ದು, ನಟ ದರ್ಶನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೇ ನಟ ಸುದೀಪ್ ಆಪ್ತ ಲಾಯರ್ ಜಗದೀಶ್ ಮನೆಗೆ ನುಗ್ಗಿ ದರ್ಶನ್ ಅಭಿಮಾನಿಗಳು ಹೊಡೆದಿದ್ದಾರೆ ಎಂದು ಬರೆಯಲಾಗಿದೆ. ಆದರೆ ಇದು ಸುಳ್ಳು ಎಂದು ಹೇಳಲಾಗಿದ್ದು ಅಸಲಿ ಕಾರಣವೇ ಬೇರೆ ಇದೆ ಎನ್ನಲಾಗಿದೆ. ಈ ಕುರಿತು ಸ್ವತಃ ಲಾಯರ್ ಜಗದೀಶ್ ಅವರ ಸ್ಪಷ್ಟೀಕರಣ ನೀಡಿದ್ದಾರೆ.

ಸ್ಪಷ್ಟನೆ ನೀಡಿದ ಲಾಯರ್!
ಘಟನೆ ಕುರಿತು ಸ್ಪಷ್ಟನೆ ನೀಡಿದ ಜಗದೀಶ್ ಅವರು, ನಮ್ಮ ಕಾಂಪ್ಲೆಕ್ಸ್ ಮುಂದೆ ರಸ್ತೆ ಬ್ಲ್ಯಾಕ್ ಮಾಡಿಕೊಂಡು ಅಣ್ಣಮ್ಮ ದೇವಿ ಕೂರಿಸಿದ್ದಾರೆ. ಅದರ ಬಗ್ಗೆ ಪ್ರಶ್ನಿಸಿದ್ದಕ್ಕೆ 40 ಜನ ದಾಂಡಿಗರು ಅಟ್ಯಾಕ್ ಮಾಡಿದ್ದಾರೆ. ನನ್ನ ಗನ್ ಮ್ಯಾನ್​ ಮನೆಯಲ್ಲಿದ್ದಾರೆ ಬೆಳಗ್ಗೆ ಎಬ್ಬಿಸುವುದು ಬೇಡ ಅಂತ ವಾಕಿಂಗ್​ಗೆ ಬಂದಾಗ ಹಲ್ಲೆ ಮಾಡಿದ್ರು’ ಎಂದು ಲಾಯರ್​ ಜಗದೀಶ್ ಹೇಳಿದ್ದಾರೆ.

Comments are closed.