Saif Ali Khan: ಕಳ್ಳನು ಚಾಕು ಇರಿದಾಗ ಆಸ್ಪತ್ರೆಗೆ ತಲುಪಿಸಿದ ಆಟೋ ಡ್ರೈವರ್‌ಗೆ ಸೈಫ್ ಕೊಟ್ಟ ಹಣ ಎಷ್ಟು?

Saif Ali Khan: ಇತ್ತೀಚೆಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ಕಳ್ಳನೊಬ್ಬ ನುಗ್ಗಿ ದರೋಡೆಗೆ ಯತ್ನಿಸಿ ನಟನಿಗೆ ಚಾಕು ಇರಿದಿದ್ದು ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿತ್ತು. ಚಾಕುವಿನಿಂದ ಗಾಯಗೊಂಡಿದ್ದ ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರಗೆ ದಾಖಲಿಸಬೇಕಿತ್ತು. ಈ ವೇಳೆ ನಟನಿಗೆ ಸಹಾಯ ಮಾಡಿದ್ದು ಒಬ್ಬ ಆಟೋ ಚಾಲಕ. ಈ ಆಟೋ ಚಾಲಕ ಸೈಫ್ ಅಲಿ ಖಾನ್ ಅವರನ್ನು ತಮ್ಮ ಆಟೋ ರಿಕ್ಷಾದಲ್ಲಿ ಕೂರಿಸಿಕೊಂಡ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾವಿಸಿದ್ದ.
ಇದೀಗ ನಿನ್ನೆಯಷ್ಟೆ ಸೈಫ್ ಅಲಿ ಖಾನ್ ಅವರು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಸ್ವಲ್ಪ ಚೇತರಿಸಿಕೊಂಡು ತಮ್ಮ ಪ್ರಾಣ ಉಳಿಸಿ ಸಾಹಸ ಮೆರೆದ ಆಟೋ ಚಾಲಕನಿಗೆ ಸೈಪ್ ಅಲಿ ಖಾನ್ ಏನು ಉಡುಗೊರೆ ನೀಡಿದ್ದಾರೆ? ಅಥವಾ ಎಷ್ಟು ಧನಸಹಾಯ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಆಟೋ ಚಾಲಕ ಸೈಫ್ ಅಲಿ ಖಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ ನಾನು ಯಾವ ಹಣವನ್ನು ಪಡೆದಿಲ್ಲ. ಅಲ್ಲದೆ ಇದುವರೆಗೂ ಅವರಿಂದ ಯಾರು ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ತಿಳಿಸಿದ್ದಾರೆ
ಇನ್ನು ಘಟನೆ ಬಗ್ಗೆ ವಿವರಿಸಿದ ಆಟೋ ಚಾಲಕ, ಅಂದು ರಾತ್ರಿ 2-3 ಗಂಟೆ ಸುಮಾರಿಗೆ ನಾನು ಆಟೋದಲ್ಲಿ ಅತ್ತ ಹೋಗುತ್ತಿದ್ದೆ. ಮಹಿಳೆಯೊಬ್ಬರು ಆಟೋ ಎಂದು ಕೂಗಿದರು. ಗೇಟ್ ಒಳಗಿನಿಂದಲೂ ಯಾರೋ ಆಟೋಗಾಗಿ ಕರೆದಂತೆ ಆಯಿತು. ಕೂಡಲೇ ನಾನು ಆಟೋ ಯೂಟರ್ನ್ ತಗೊಂಡು ಗೇಟ್ ಮುಂದೆ ನಿಲ್ಲಿಸಿದೆ. ಆಗ ವ್ಯಕ್ತಿಯೊಬ್ಬರಿಗೆ ದೇಹದಿಂದ ರಕ್ತ ಸೋರುತ್ತಿತ್ತು. ಮೂರ್ನಾಲ್ಕು ಜನ ಅವರನ್ನಿ ಹಿಡಿದು ಆಟೋ ಹತ್ತಿಸಿದರು. ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದರು. ನಾನು ಅವರನ್ನು ಆಸ್ಪತ್ರೆ ಬಳಿ ಡ್ರಾಪ್ ಮಾಡಿದೆ ಬಳಿಕ ನನಗೆ ಅದು ಸೈಫ್ ಅಲಿಖಾನ್ ಎನ್ನುವುದು ಗೊತ್ತಾಯಿತು ಎಂದು ಭಜನ್ ಸಿಂಗ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಆಟೋ ಹತ್ತಿದ್ದಾಗ ಸೈಫ್ ಪ್ರಜ್ಞಾವಸ್ಥೆಯಲ್ಲೇ ಇದ್ದರು. ಆಸ್ಪತ್ರೆಗೆ ತಲುಪಲು ಇನ್ನು ಎಷ್ಟು ಸಮಯ ಬೇಕು ಎಂದು ಕೇಳಿದ್ದರು. ನಾನು 2 ನಿಮಿಷ ಅಷ್ಟೇ ಎಂದು ಕರೆದುಕೊಂಡೆ ಹೋದೆ. ಆಸ್ಪತ್ರೆ ಬಳಿಕ ಇಳಿದ ಕೂಡಲೇ “ಬೇಗ ಸ್ಟ್ರೆಚರ್ ತೆಗೆದುಕೊಂಡು ಬನ್ನಿ, ನಾನು ಸೈಫ್ ಅಲಿಖಾನ್” ಎಂದು ಆ ವ್ಯಕ್ತಿ ಹೇಳಿದರು. ಆಗ ನನಗೆ ಗೊತ್ತಾಯಿತು ಅದು ಸೈಫ್ ಅಲಿಖಾನ್ ಎಂದು. ನನಗೆ ಆಗ ಅವರನ್ನು ಆಸ್ಪತ್ರೆಗೆ ಸೇರಿಸುವುದಷ್ಟೆ ಗುರಿಯಾಗಿತ್ತು. ಯಾವುದೇ ಹಣವನ್ನು ಆ ಸಮಯದಲ್ಲಿ ನಾನು ತೆಗೆದುಕೊಂಡಿಲ್ಲ” ಎಂದು ಭಜನ್ ಸಿಂಗ್ ಹೇಳಿಕೊಂಡಿದ್ದಾರೆ.
Comments are closed.