Kumbh Mela: ನಾಗಾಸಾಧುಗಳನ್ನು ನೋಡಿ ಬಟ್ಟೆ ಬಿಚ್ಚಿ ಸ್ನಾನಕ್ಕಿಳಿದ ವಿದೇಶಿ ಮಹಿಳೆ

Kumbh Mela: ಇಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದ 9ನೇ ದಿನ. ಸೋಮವಾರ ಬೆಳಗ್ಗೆ 10 ಗಂಟೆ ವೇಳೆಗೆ 30 ಲಕ್ಷಕ್ಕೂ ಹೆಚ್ಚು ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದರು. ಇಲ್ಲಿಯವರೆಗೆ 8.5 ಕೋಟಿಗೂ ಹೆಚ್ಚು ಜನರು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಮಹಾಕುಂಭದಲ್ಲಿ ನಾಗಾಗಳನ್ನು ನೋಡಿದ ವಿದೇಶಿ ಮಹಿಳೆಯೊಬ್ಬರು ಬಟ್ಟೆ ಬಿಚ್ಚಿ ಸಂಗಮ್‌ಗೆ ಹಾರಿರುವ ಘಟನೆಯೊಂದು ಈ ಹಿಂದೆ ನಡೆದಿತ್ತು. ನಿಮಗೆ ಈ ವಿಷಯ ಗೊತ್ತಿದೆಯೇ? ಬನ್ನಿ ತಿಳಿಯೋಣ.
2001 ರ ಕುಂಭಮೇಳದ ಸಮಯದಲ್ಲಿ ಮುಂಜಾನೆ ನಾಗಾ ಸಾಧುಗಳು ಡೋಲು, ನಾಗದಂಡದೊಂದಿಗೆ ರಾಜಸ್ನಾನಕ್ಕೆ ಆಗಮಿಸಿದರು. ಎಲ್ಲರಿಗೂ ಗೊತ್ತಿರುವ ಹಾಗೆ ಮಹಾಕುಂಭದಲ್ಲಿ ನಾಗಾಸಾಧುಗಳು ಪವಿತ್ರ ಸ್ನಾನ ಮಾಡಿದ ನಂತರ ಉಳಿದ ಭಕ್ತರು ಪುಣ್ಯ ಸ್ನಾನ ಮಾಡಲು ಅವಕಾಶ ನೀಡುವುದು ಕ್ರಮ. ಹೀಗೆ ಅಂದು ಕೂಡಾ, ಕುಣಿದು ಕುಪ್ಪಳಿಸುತ್ತಾ, ಹರಹರ ಮಹಾದೇವ್ ಎಂದು ಜಪಿಸುತ್ತಾ ಸಂಗಮದಲ್ಲಿ ಸ್ನಾನ ಮಾಡಲು ಇಳಿದಿದ್ದಾರೆ ನಾಗಸಾಧುಗಳು. ಕೂಡಲೇ ಅಲ್ಲಿದ್ದ 25-30 ವರ್ಷದ ವಿದೇಶಿ ಮಹಿಳೆಯೋರ್ವಳು ನಾಗಾಸಾಧುಗಳನ್ನು ನೋಡಿದ ತಕ್ಷಣ ತನ್ನ ಬಟ್ಟೆಗಳನ್ನು ತೆಗೆಯಲು ಪ್ರಾರಂಭಿಸಿದಳು. ಜನರು ಏನೆಂದು ಅರ್ಥಮಾಡಿಕೊಳ್ಳುವ ಮೊದಲು, ಮಹಿಳೆ ತನ್ನ ಬಟ್ಟೆಗಳನ್ನು ತೆಗೆದು ಸಂಗಮ್‌ಗೆ ಹಾರಿದಳು.
ಸ್ವಲ್ಪ ಸಮಯದ ನಂತರ, ಮಹಿಳೆ ಸ್ನಾನ ಮುಗಿಸಿ ಹೊರಬಂದು ಸಂಗಮ ಬಳಿಯ ಮರಳಿನ ರಾಶಿಯ ಮೇಲೆ ಉರುಳಲು ಪ್ರಾರಂಭಿಸಿದಳು. ನಾಗಾಗಳನ್ನು ನೋಡಿದ ಅವಳು ತನ್ನ ಬೆತ್ತಲೆ ದೇಹಕ್ಕೆ ಮರಳನ್ನು ಉಜ್ಜಲು ಪ್ರಾರಂಭಿಸಿದಳು. ಅವಳನ್ನು ನೋಡಲು ಜನಸಾಗರವೇ ನೆರೆದಿತ್ತು. ನಂತರ ಕೆಲವು ಪೊಲೀಸ್ ಅಧಿಕಾರಿಗಳು ಅಲ್ಲಿಗೆ ಬಂದು ಆಕೆಗೆ ಕಂಬಳಿ ಹೊದಿಸಿ ತಮ್ಮೊಂದಿಗೆ ಕರೆದೊಯ್ದರು.
ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಆ ಮಹಿಳೆಯ ಚಿತ್ರಗಳನ್ನು ಪ್ರಕಟಿ ಮಾಡಿತ್ತು. ಆಗ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರವಿತ್ತು. ರಾಜನಾಥ್ ಸಿಂಗ್ ಸಿಎಂ ಆಗಿದ್ದು, ಲಾಲ್ಜಿ ಟಂಡನ್ ಅವರಿಗೆ ಕುಂಭಮೇಳದ ಜವಾಬ್ದಾರಿ ನೀಡಲಾಗಿತ್ತು. ಮಹಿಳೆಯ ಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ಲಾಲ್ಜಿ ಟಂಡನ್ ಮಾಧ್ಯಮಗಳ ವಿರುದ್ಧ ಕೋಪಗೊಂಡಿದ್ದರು.
Comments are closed.