Mangaluru: ವನದುರ್ಗೆಯ ದರ್ಶನ ಪಡೆದ ನಟಿ, ಬಿಗ್‌ಬಾಸ್ ಸ್ಪರ್ಧಿ ಗೌತಮಿ

BBK 11: ಬಿಗ್‌ಬಾಸ್ ಜರ್ನಿಯಿಂದ ಹೊರಬಂದಿರುವ ನಟಿ ಗೌತಮಿ ಅವರು ವನದುರ್ಗ ದೇವರ ದರ್ಶನವನ್ನು ಪಡೆದಿದ್ದಾರೆ. ಸತ್ಯ ತಂಡದ ಜೊತೆ ಅವರು ವನದುರ್ಗಕ್ಕೆ ಅವರು ಈ ಹಿಂದೆ ಭೇಟಿ ನೀಡಿದ್ದು. ತಾಯಿಯ ಮಹಿಮೆಯನ್ನು ಯೂಟ್ಯೂಬ್‌ನಲ್ಲಿ ತಮ್ಮ ಅನುಭವ ಹೇಳಿದ್ದರು. ವನದುರ್ಗ ದೇವಿಯನ್ನು ಅಪಾರವಾಗಿ ನಂಬುವ ಗೌತಮಿ, ತಮ್ಮ ಹೇರ್ ಆಯಿಲ್ ಬ್ರ್ಯಾಂಡ್ ಗೆ ದೇವಿ ಹೆಸರನ್ನೇ ಇಟ್ಟಿದ್ದಾರೆ.
ಬಿಗ್‌ಬಾಸ್ ಮನೆಯಲ್ಲಿದ್ದಾಗ, ಪ್ರತಿ ದಿನ ವನದುರ್ಗೆ ಜಪ ಅವರು ಮಾಡುತಿದ್ದರು. ಈ ದೇವಸ್ಥಾನಕ್ಕೆ ಬಂದ ಮೇಲೆ ನನಗೆ ಜೀವನದಲ್ಲಿ ಒಳ್ಳೆಯದಾಗಿದೆ ಎಂದು ಅವರು ಹೇಳಿದ್ದಾರೆ.
ವನದುರ್ಗಾ ದೇವಿ ದೇವಸ್ಥಾನ ಎಲ್ಲಿದೆ?
ಮೂಲ ವನದುರ್ಗಾ ದೇವಸ್ಥಾನ ಮಂಗಳೂರಿನಿಂದ 30 ಕಿಲೋಮೀಟರ್ ದೂರದಲ್ಲಿರುವ ಬಂಟ್ವಾಳದ ಬಿ.ಸಿ ರೋಡ್ ನಲ್ಲಿದೆ. ಶ್ರೀ ವನದುರ್ಗಾ ತಥಾ ಜಲಾಂತರ್ಗತ ನಾಗ ಸಾನಿಧ್ಯ ದೇವಸ್ಥಾನದ ಹೆಸರು. ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ದೇವಸ್ಥಾನ ತೆರೆದಿರುತ್ತದೆ.
Comments are closed.