Hampi : ಬಾಳೆಹಣ್ಣನ್ನು ನಿಷೇಧಿಸಿದ ರಾಜ್ಯದ ಪ್ರತಿಷ್ಠಿತ ದೇವಾಲಯ!! ಕಾರಣ ಹೀಗಿದೆ ನೋಡಿ

Hampi : ದೇವಾಲಯಕ್ಕೆ ಹೋಗುವಾಗ ಹಣ್ಣು ಕಾಯಿ ತೆಗೆದುಕೊಂಡು ಹೋಗುವುದು ವಾಡಿಕೆ. ತೆಂಗಿನಕಾಯಿಯೊಂದಿಗೆ ಬಾಳೆಹಣ್ಣು ಕೊಂಡು ಹೋಗುವುದು ನಮ್ಮ ಹಿಂದೂ ಸಂಪ್ರದಾಯ. ಆದರೆ ರಾಜ್ಯದ ಈ ಪ್ರತಿಷ್ಠಿತ ದೇವಾಲಯ ಒಂದರಲ್ಲಿ ದೇವಾಲಯಕ್ಕೆ ಹೋಗುವ ಭಕ್ತರು ಬಾಳೆಹಣ್ಣನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.

ಹೌದು, ರಾಜ್ಯದ ಪ್ರತಿಷ್ಠಿತ ಹಾಗೂ ಪುರಾತನ ದೇವಾಲಯವಾದ ಹಂಪಿ ವಿರೂಪಾಕ್ಷ ದೇವಾಲಯ( Hampi Virupaksha Temple) ಈ ಬಾಳೆಹಣ್ಣನ್ನೇ ನಿಷೇಧ ಮಾಡಿಬಿಟ್ಟಿದೆ. ನಿಮಗಿದು ಅಚ್ಚರಿ ತರಿಸಬಹುದು. ದೇವಾಲಯವೇ ಬಾಳೆಹಣ್ಣನ್ನು ನಿಷೇಧಿಸಲು ಕಾರಣವೇನು? ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಬಹುದು. ಅಚ್ಚರಿ ಎನಿಸಿದರು ಇದು ಸತ್ಯ, ಹಾಗೆ ಅದರ ಕಾರಣ ಕೇಳಿದ್ರೆ ನಿಮಗೂ ಸರಿ ಎನಿಸಬಹುದು. ಹಾಗಿದ್ರೆ ಕಾರಣವನ್ನು ನೋಡೋಣ ಬನ್ನಿ

7ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಶಿವನ ದೇವಾಲಯಕ್ಕೆ ನಿತ್ಯ ಸಾವಿರಾರು ಮಂದಿ ಆಗಮಿಸುತ್ತಾರೆ. ಈ ದೇವಾಲಯದ ಪ್ರಮುಖ ಆಕರ್ಷಣೆ ಅಂದರೆ ಅಲ್ಲಿರುವ ಆನೆ. ಈ ಆನೆ ನೋಡಲು ಬರುವವರು ಆನೆಗೆ ಬಾಳೆಹಣ್ಣು ತಿನ್ನಿಸಲು ಮುಂದೆ ಬೀಳುತ್ತಾರೆ, ಹಾಗೆ ಆನೆಗೆಂದು ತರವು ಬಾಳೆಹಣ್ಣಿನಲ್ಲಿ ಕೆಲವನ್ನು ಅವರೇ ತಿಂದು ಎಲ್ಲೆಂದರಲ್ಲಿ ಸಿಪ್ಪೆಯನ್ನು ಎಸೆಯುತ್ತಾರೆ ಎಂಬುದು ದೇವಾಲಯ ಆಡಳಿತ ಮಂಡಳಿತ ತಲೆನೋವಾಗಿತ್ತು. ಅಲ್ಲದೆ ಆನೆಗೆ ಬಾಳೆಹಣ್ಣು ನೀಡುವ ಭರದಲ್ಲಿ ಅಪಾಯಗಳ ತಂದುಕೊಳ್ಳುವುದು ಕೂಡ ನಡೆಯುತ್ತಿದೆ. ಇದಕ್ಕೆಲ್ಲ ಕಡಿವಾಣ ಹಾಕಲು ಬಾಳೆಹಣ್ಣು ತರದಂತೆ ಸೂಚಿಸಲಾಗಿದೆ.

ಆನೆ ಹಾಗೂ ಭಕ್ತರ ಹಿತದೃಷ್ಟಿಯಿಂದ ಬಾಳೆಹಣ್ಣಿಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ವಿರೂಪಾಕ್ಷ ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ‘ಭಕ್ತರು ಉತ್ಸಾಹದಿಂದ ಆನೆಗೆ ಅತಿಯಾಗಿ ಬಾಳೆಹಣ್ಣು ನೀಡುತ್ತಾರೆ. ಇದು ಅಲ್ಲಿನ ಸ್ಥಳವನ್ನು ಕೊಳಕು ಮಾಡುವ ಜೊತೆಗೆ ಆನೆಯ ಆರೋಗ್ಯಕ್ಕೂ ಹಾನಿಕಾರಕ. ಹಾಗೆ ಬಾಳೆಹಣ್ಣುಗಳ ತಂದಿರುವ ಪ್ಲಾಸ್ಟಿಕ್ ಚೀಲಗಳನ್ನು ಇಲ್ಲಿ ಬಿಟ್ಟು ತೆರಳುತ್ತಿದ್ದು ಅದನ್ನು ವಿಲೇವಾರಿ ಮಾಡುವುದು ದೊಡ್ಡ ಕೆಲಸ ಎಂದು ದತ್ತಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Comments are closed.