Mangaluru : ಮಂಗಳೂರಿಗೆ ರೈಲು ಬಂದದ್ದು ಯಾವಾಗ? ಮಂಗಳೂರಿಂದ ಪಾಕಿಸ್ತಾನಕ್ಕೂ ರೈಲು ವ್ಯವಸ್ಥೆ ಇತ್ತು ಎಂಬುದು ಗೊತ್ತಾ?

Mangaluru : 1853 ರಲ್ಲಿ ಭಾರತದ ರೈಲು ಸಂಪರ್ಕ ಆರಂಭವಾಯಿತು. ಹೀಗಾಗಿ ಭಾರತೀಯ ರೈಲ್ವೇಗೆ ಸುಮಾರು 170 ವರ್ಷಗಳ ಇತಿಹಾಸ ಇದೆ. ಇವತ್ತಿನ ಈ ದಿನ ಭಾರತದದ್ಯಂತ ಸುಮಾರು 23 ಸಾವಿರಕ್ಕಿಂತಲೂ ಹೆಚ್ಚಿನ ರೈಲುಗಳು ಓಡಾಟ ನಡೆಸುತ್ತವೆ. ರೈಲ್ವೇ ವ್ಯವಸ್ಥೆಯಲ್ಲಿ ಇಡೀ ಜಗತ್ತಿನಲ್ಲೇ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ದೇಶದಲ್ಲಿ ಅನೇಕ ರೈಲು ನಿಲ್ದಾಣಗಳು ಆರಂಭದಿಂದಲೂ ಮುನ್ನಣೆ ಪಡೆದಿವೆ. ಅವುಗಳ ಪೈಕಿ ಕರಾವಳಿ ಭಾಗದ ಮಂಗಳೂರಿನ ರೈಲ್ವೆ ನಿಲ್ದಾಣವು ಕೂಡ ಒಂದು. ಹಾಗಿದ್ರೆ ಮಂಗಳೂರು ರೈಲ್ವೆ ನಿಲ್ದಾಣ ಯಾವಾಗ ಆರಂಭವಾಯಿತು? ಆರಂಭದಲ್ಲಿ ಎಲ್ಲಿಗೆಲ್ಲಾ ರೈಲಿನ ವ್ಯವಸ್ಥೆ ಇತ್ತು? ಇಲ್ಲಿದೆ ನೋಡಿ ಡೀಟೇಲ್ಸ್.

 

1907 ರಲ್ಲಿ ನಮ್ಮ ಮಂಗಳೂರಿಗೆ ಮೊದಲ ರೈಲು ಬಂದಿತು. ಅಂದರೆ ಭಾರತಕ್ಕೆ ರೈಲಿನ ಪರಿಚಯ ಆಗಿ 54 ವರ್ಷಗಳ ನಂತರ. 1906 ರ ತನಕ ರೈಲ್ವೇ ಪಟ್ಟಿ ಕಾಂಞಂಗಾಡ್ ವರೆಗೆ ಮಾತ್ರ ಇತ್ತು. ತದನಂತರ ಕಾಸರಗೋಡು, ಕುಂಬ್ಳೆ ಆಗಿ ಮಂಗಳೂರಿಗೆ ಬರುತ್ತದೆ. 1907 ರಲ್ಲಿ ಕ್ಯಾಲಿಕಟ್ ನಿಂದ ಮಂಗಳೂರಿಗೆ ಮೊದಲ ರೈಲು ಬರುತ್ತದೆ. ಇದನ್ನು ಆಗದ ಮದ್ರಾಸ್ ಗವರ್ನರ್ ಹೆಚ್‌. ಇ. ಸರ್ ಆರ್ಥರ್ ಲವ್ಲಿ ಉದ್ಘಾಟನೆ ಮಾಡಿದರು.

ಇನ್ನು 1910 ರಲ್ಲಿ ಮದ್ರಾಸ್‌ನಿಂದ ಮಂಗಳೂರಿಗೆ ರೈಲು ಬರಲು ಪ್ರಾರಂಭವಾಯಿತು. ಆ ರೈಲಿನಲ್ಲಿ ನಮ್ಮ ಮಂಗಳೂರಿನಲ್ಲಿ ಆಗಿತ್ತಿದ್ದ ಹಂಚುಗಳು ರವಾನೆ ಆಗುತ್ತಿದ್ದವು. ವಿಶೇಷವೆಂದರೆ 1929 ರಲ್ಲಿ ಮಂಗಳೂರಿನಿಂದ ಪಾಕಿಸ್ತಾನದ ಪೇಶಾವರಕ್ಕೆ ರೈಲ್ವೇ ವ್ಯವಸ್ಥೆ ಇದ್ದವು. ಆ ರೈಲಿನ ಹೆಸರು ಗ್ರಾಂಡ್ ಟ್ರಂಕ್ ಎಕ್ಸ್‌ಪ್ರೆಸ್. ಇದು ಭಾರೀ ಉದ್ದದ ರೈಲು ಜರ್ನಿ ಆಗಿದ್ದು, ಹೋಗಿ ತಲುಪಲು 4 ರಿಂದ 5 ದಿನಗಳು ಬೇಕಿದ್ದವಂತೆ. ಇಷ್ಟೆಲ್ಲಾ ಆದರೂ ಕೂಡ ಮಂಗಳೂರಿಗೆ ಶಾಶ್ವತ ರೈಲ್ವೆ ನಿಲ್ದಾಣ ಆಗಿದ್ದು 1930ರ ನಂತರ.

ನಂತರದಲ್ಲಿ ಮಂಗಳೂರು ಸಿಟಿಯ ವಳಗೆ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ಎನ್ನುವ ಎರಡು ದೊಡ್ಡ ಸ್ಟೇಷನ್ ಗಳು ಆಗುತ್ತದೆ. ದಕ್ಷಿಣ ರೈಲ್ವೇ ವಲಯದ ಪಾಲಕ್ಕಾಡ್ ರೈಲ್ವೇ ವಿಭಾಗದಲ್ಲಿ ನಮ್ಮ ಮಂಗಳೂರಿನ ರೈಲ್ವೇ ಸ್ಟೇಷನ್ ಬರುತ್ತದೆ. ಇಲ್ಲಿಂದ ದೇಶದ ಮೂಲೆ ಮೂಲೆಗೆ ಹೋಗಲು ಒಂದಷ್ಟು ರೈಲುಗಳು ಇವೆ.

Comments are closed, but trackbacks and pingbacks are open.