Holiday : ಜನವರಿ 18ಕ್ಕೆ ಈ ಜಿಲ್ಲೆಯ ಶಾಲಾ-ಕಾಲೇಜು, ಕಚೇರಿಗಳಿಗೆ ಸರ್ಕಾರಿ ರಜೆ ಘೋಷಣೆ!!
Holiday : ಇತೀಚೆಗೆ ವಿದ್ಯಾರ್ಥಿಗಳು ಅತೀ ಹೆಚ್ಚು ಸಂಭ್ರಮದಲ್ಲಿದ್ದಾರೆ. ಏಕೆಂದರೇ ರಜೆಯ ಮೇಲೆ ರಜಾದಿನಗಳು ಘೋಷಣೆಯಾಗುತ್ತಿವೆ.. ಅದೇ ರೀತಿ ಇದೀಗ ಮತ್ತೊಂದು ರಜಾದಿನದ ಮಾಹಿತಿಯೊಂದನ್ನು ನಾವು ನೀಡಲಿದ್ದೇವೆ.
ರಜೆ ಅಂದರೆ ಸಾಕು ಶಾಲಾ-ಕಾಲೇಜು ಮಕ್ಕಳ ಕಿವಿಗಳು ಬೇಗ ನೆಟ್ಟಗಾಗಿ ಬಿಡುತ್ತವೆ. ಅದರಲ್ಲೂ ಸರ್ಕಾರಿ ರಜೆ ಹೊರತುಪಡಿಸಿ ಬೇರೆ ರಜೆಗಳು ಸಿಕ್ಕರಂತೂ ಅವರಿಗೆ ಹಬ್ಬವೋ ಹಬ್ಬ. ಹಾಗೆಯೇ ಇದೀಗ ಜನವರಿ 18ರಂದು ಅಂದರೆ ಶನಿವಾರದಂದು ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದೆ. ಹಾಗಂತ ಇದು ನಮ್ಮ ರಾಜ್ಯದ ಶಾಲಾ-ಕಾಲೇಜುಗಳಿಗೆ ಘೋಷಿಸಿದ ರಜೆಯಲ್ಲ. ಬದಲಿಗೆ ತಂಜಾವೂರು ಜಿಲ್ಲೆಯ ತಿರುವೈಯಾರಿನಲ್ಲಿ ಜನವರಿ 18ರಂದು ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿದೆ
ಹೌದು, ತಂಜಾವೂರು ಜಿಲ್ಲೆಯ ತಿರುವೈಯಾರು ಎಂದರೆ ತ್ಯಾಗರಾಜರ್ ಆರಾಧನಾ ಹಬ್ಬ ನೆನಪಾಗುತ್ತದೆ. ಆ ಮೂಲಕ ಪ್ರತಿ ವರ್ಷ ತ್ಯಾಗರಾಜರ ಆರಾಧನೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷ ತಿರುವಯ್ಯರು ತ್ಯಾಗರಾಜರ್ ಆರಾಧನೆಯನ್ನು ಜನವರಿ 18 ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕಾ ಅವರು ಜಿಲ್ಲೆಗೆ ಸ್ಥಳೀಯ ರಜೆ ಘೋಷಿಸಿದ್ದಾರೆ. ಹೀಗಾಗಿ ಜನವರಿ 18ರಂದು ಈ ಭಾಗದಲ್ಲಿ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳು ಅಂದು ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
Comments are closed, but trackbacks and pingbacks are open.