Pavitra-Darshan : ಕೋರ್ಟ್‌ನಲ್ಲಿ ದರ್ಶನ್- ಪವಿತ್ರಾ ಗೌಡ ಮುಖಾಮುಖಿ , ಪವಿತ್ರಳನ್ನು ನೋಡುತ್ತಿದ್ದಂತೆ ದರ್ಶನ್ ಮಾಡಿದ್ದೇನು ಗೊತ್ತಾ? ಕೋರ್ಟಲ್ಲಿ ಇದ್ದವರೆಲ್ಲ ಶಾಕ್ !!
Pavitra-Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ನಟ ದರ್ಶನ್ ಮತ್ತು ಸ್ನೇಹಿತೆ ಪವಿತ್ರಾ ಗೌಡ ಇಂದು ನ್ಯಾಯಾಲಯದಲ್ಲಿ ಬಹಳ ದಿನಗಳ ನಂತರ ಮುಖಾಮುಖಿಯಾಗಿದ್ದು, ಪವಿತ್ರಳನ್ನು ದರ್ಶನ್ ಅವರು ಸಂತೈಸಿದ್ದಾರೆ ಎನ್ನಲಾಗಿದೆ.
ಹೌದು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಜೈಲು ಸೇರಿದ್ದ 17 ಆರೋಪಿಗಳು ಬೇಲ್ ಮೇಲೆ ಹೊರ ಬಂದಿದ್ದಾರೆ. ಇಂದು ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಗೆ 17 ಆರೋಪಿಗಳು ಆಗಮಿಸಿದ್ದರು. ಆಗ ದರ್ಶನ್ ಮತ್ತು ಪವಿತ್ರಾ ಗೌಡ ಮುಖಾ ಮುಖಿ ಆಗಿದ್ದಾರೆ. ದರ್ಶನ್‌ನ ನೋಡುತ್ತಿದ್ದಂತೆ ಪವಿತ್ರಾ ಗೌಡ ಭಾವುಕರಾಗುತ್ತಾರೆ. ಆಗ ಪವಿತ್ರಾ ಬೆನ್ನು ಸವರಿ ದರ್ಶನ್ ಸಾಂತ್ವನ ಹೇಳಿದರು ಎಂದು ತಿಳಿದುಬಂದಿದೆ.
ಕೋರ್ಟ್ ನಲ್ಲಿ ನಡೆದಿದ್ದೇನು?
ಪವಿತ್ರಾ ಗೌಡ ಮೊದಲೇ ಬಂದು ತಮ್ಮ ವಕೀಲರ ಜೊತೆ ನಿಂತಿದ್ದರು. ದರ್ಶನ್ ಕೊಂಚ ತಡವಾಗಿ ಬಂದಿದ್ದಾರೆ. ಬಂದ ತಕ್ಷಣ ದರ್ಶನ್ ರನ್ನು ಪವಿತ್ರಾ ಮಾತನಾಡಿಸಿದ್ದಾರೆ. ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ದರ್ಶನ್ ಕೂಡಾ ಪವಿತ್ರಾ ಬೆನ್ನು ಸವರಿ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ
ಅಂದಹಾಗೆ ಸುಮಾರು 6-7 ತಿಂಗಳ ನಂತರ ದರ್ಶನ್ ಮತ್ತು ಪವಿತ್ರಾ ಗೌಡ ಭೇಟಿ ಆಗಿರುವುದು. ಇಬ್ಬರು ಪರಪ್ಪನ ಅಗ್ರಹಾರದಲ್ಲಿ ಇದ್ದರು ಆದರೆ ದರ್ಶನ್ ಜೈಲಿನ ಕೂಲ್ ಲೈಫ್ ಫೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬಳ್ಳಾರಿಗೆ ಎತ್ತಂಗಡಿ ಮಾಡಿದ್ದರು. ಅಲ್ಲಿಂದ ದರ್ಶನ್ ಮತ್ತು ಪವಿತ್ರಾ ಗೌಡ ಇನ್ನೂ ದೂರ ದೂರ. ಜಾಮೀನು ಪಡೆದ ಹೊರ ಬಂದಾಗ ಪವಿತ್ರಾ ಗೌಡ ಅಲ್ಲೇ ಇದ್ದ ಮುನೇಶ್ವರ ಗುಡಿಗೆಯಲ್ಲಿ ಪೂಜೆ ಸಲ್ಲಿಸಿದ್ದರು. ಆಗ ಪವಿತ್ರಾ ಮೌನವಾಗಿ ನಿಂತಿದ್ದರೂ ಸಹ ಅವರ ತಾಯಿ ಅರ್ಚನೆ ಸಮಯದಲ್ಲಿ ದರ್ಶನ್ ಹೆಸರು ತೆಗೆದಿದ್ದು ಭಾರೀ ಟ್ರೋಲ್ ಆಗಿತ್ತು.
Comments are closed, but trackbacks and pingbacks are open.