ದ.ಕ: ಮುಸ್ಲಿಂ ಯುವತಿಯನ್ನು ಮದುವೆಯಾದ ಬೆಳ್ತಂಗಡಿಯ ಹಿಂದೂ ಯುವಕ
Belthangady: ಹಿಂದೂ ಯುವಕನೋರ್ವ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿರುವ ಘಟನೆಯೊಂದು ಬೆಳ್ತಂಗಡಿಯಲ್ಲಿ ನಡೆದಿದೆ. ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕ ಮನೆ ಮಂದಿಯ ಒಪ್ಪಿಗೆಯ ಮೇರೆಗೆ ಹಿಂದೂ ಸಂಪ್ರದಾಯ ಪ್ರಕಾರ ಜ.8 ರಂದು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ವರ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಬೂದನ ಗೌಡನ ಮಗ ಕೃಷಿಕ ಹರೀಶ್ ಗೌಡ (24 ವರ್ಷ) ಈತನ ವಿವಾಹವು ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಕಾರು ಯುವತಿ ಸುಹಾನ (19) ಎಂಬಾಕೆಯನ್ನು ಮದುವೆಯಾಗಿದ್ದಾನೆ. ಅಂದ ಹಾಗೆ ಇವರಿಬ್ಬರದು ಫೇಸ್ಬುಕ್ ಲವ್.
ಯುವತಿ ಎಂದಿನಂತೆ ಕಂಪ್ಯೂಟರ್ ಕ್ಲಾಸ್ಗೆಂದು ಮನೆಯಿಂದ ತೆರಳಿದ್ದು, ಆದರೆ ಮನೆಗೆ ವಾಪಸಾಗದ ಕಾರಣ ಮನೆಯವರು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದೂರನ್ನು ನೀಡಿದ್ದರು. ಈ ಸಂದರ್ಭದಲ್ಲಿ ಹುಡುಗ, ಹುಡುಗಿ ಮದುವೆಯಾಗಿ ಧರ್ಮಸ್ಥಳ ಪೊಲೀಸರ ಮುಂದೆ ಹಾಜರಾಗಿ ಮದುವೆಯಾಗಿರುವ ಕುರಿತು ಹೇಳಿದ್ದಾರೆ.
ನಂತರ ಮೂಡಬಿದಿರೆ ಪೊಲೀಸ್ ಠಾಣೆಗೆ ಹೋದ ಯುವತಿ ತನ್ನ ಇಚ್ಛೆ ಪ್ರಕಾರ ಮದುವೆಯಾಗಿರುವುದಾಗಿ ಜ.9 ರಂದು ಹೇಳಿಕೆ ನೀಡಿದ್ದಾಳೆ. ಈ ಮೂಲಕ ಯಾವುದೇ ಗಲಾಟೆ ಇಲ್ಲದೆ ಯುವತಿ ತನ್ನ ಗಂಡನ ಜೊತೆ ತೆರಳಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ.
Comments are closed, but trackbacks and pingbacks are open.