Naxalite: ದಾರಿ ಮಧ್ಯೆ ಬಂತು ಆ ಒಂದು ಫೋನ್ ಕಾಲ್ – ಸಡನ್ ಬದಲಾಯಿತು ನಕ್ಸಲರ ಶರಣಾಗತಿ ಪ್ಲಾನ್ !!
Naxalite: 6 ನಕ್ಸಲರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗುವ ಕಾರ್ಯಕ್ರಮ ದಿಢೀರ್ ಬೆಂಗಳೂರಿಗೆ ವರ್ಗಾವಣೆಯಾಗುವ ಮೂಲಕ ಬುಧವಾರ ನಗರದಲ್ಲಿ ಹಲವು ನಾಟಕೀಯ ಬೆಳವಣಿಗೆಗೆ ಕಾರಣವಾಯಿತು. ಇದೆಲ್ಲದಕ್ಕೂ ಕಾರಣವಾದದ್ದು ಆ ಒಂದು ಫೋನ್ ಕಾಲ್.
ಹೌದು, 6 ನಕ್ಸಲರು ನಿನ್ನೆ ದಿನ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗುತ್ತಾರೆ ಎಂದು ಸ್ವಾಗತಕ್ಕಾಗಿ ಭರ್ಜರಿ ತಯಾರಿ ಮಾಡಲಾಗಿತ್ತು. ನಗರದ ಪ್ರವಾಸಿ ಮಂದಿರದಲ್ಲಿ ನಕ್ಸಲರ ಶರಣಾಗತಿ ಕಾರ್ಯಕ್ರಮಕ್ಕೆ ಬೆಳಗ್ಗೆ 7 ಗಂಟೆಯಿಂದಲೇ ಸಿದ್ಧತೆ ನಡೆದಿತ್ತು. ಒಂದು ಕಡೆ ಶಾಂತಿಗಾಗಿ ನಾಗರಿಕರ ವೇದಿಕೆ ಸದಸ್ಯರು ಪ್ರವಾಸಿ ಮಂದಿರದಲ್ಲಿ ಶರಣಾಗತಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರೆ, ಮತ್ತೊಂದೆಡೆ ಶೃಂಗೇರಿ ಬಳಿಯ ಕಾಡಿನಲ್ಲಿದ್ದ ನಕ್ಸಲರನ್ನು ಕರೆತರುವ ಕಾರ್ಯದಲ್ಲಿ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಸದಸ್ಯರು ಕಾರ್ಯನಿರ್ವಹಿಸಿದ್ದರು.
10 ಗಂಟೆಯ ವೇಳೆಗೆ ಶಾಂತಿಗಾಗಿ ನಾಗರಿಕ ವೇದಿಕೆ, ದಲಿತ ಸಂಘಟನೆಗಳ ಮುಖಂಡರು ಹಾಗೂ ನಕ್ಸಲರ ಕುಟುಂಬದವರು ಸೇರಿದಂತೆ ಮುಖ್ಯವಾಹಿನಿಗೆ ಬಂದಿರುವ ಮಾಜಿ ನಕ್ಸಲರು ಕಾದಿದ್ದರು. ಪ್ರವಾಸಿ ಮಂದಿರ ಹಾಗೂ ಜಿಲ್ಲಾಧಿಕಾರಿ ಕಚೇರಿ ಸುತ್ತಮುತ್ತ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶ್ವಾನದಳ, ಬಾಂಬ್ ನಿಷ್ಕ್ರೀಯದಳ ಸೇರಿದಂತೆ ಕೆಎಸ್ಆರ್ಪಿ ತುಕಡಿಗಳನ್ನು ನೇಮಿಸಲಾಗಿತ್ತು. ನಕ್ಸಲರು ಕೂಡ ಚಿಕ್ಕಮಗಳೂರಿನ ಅಂತ ಪ್ರಯಾಣ ಬೆಳೆಸಿದ್ದರು.
ಯಸ್, ನಕ್ಸಲರು ಕೂಡ ಹೊರಟು ಅರ್ಧ ದಾರಿ ತಲುಪಿದ್ದರು. ಅಷ್ಟರಲ್ಲಿ ಬೆಂಗಳೂರಿನಿಂದ ಬಂದ ಕರೆಯೊಂದು ಯೋಜನೆಯನ್ನು ಬದಲಾಯಿಸಿದೆ ಎಂದು ಮೂಲವೊಂದು ತಿಳಿಸಿದೆ. ಈ ಮೂಲಕ ಅಚ್ಚರಿ ಎಂಬಂತೆ ಇಡೀ ಕಾರ್ಯಕ್ರಮ ದಿಢೀರ್ ಎಂದು ಬೆಂಗಳೂರಿಗೆ ಶಿಫ್ಟ್ ಆಯಿತು. ಆರು ಮಂದಿ ನಕ್ಸಲರು ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗತರಾದರು.
ಅಂದಹಾಗೆ ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯ ಕೆ.ಎಲ್.ಅಶೋಕ್ ಕೆಲ ಮುಖಂಡರ ಜತೆ ಚರ್ಚಿಸಿ ‘ನನ್ನ ಸಮ್ಮುಖದಲ್ಲೇ ನಕ್ಸಲರು ಮುಖ್ಯವಾಹಿನಿಗೆ ಬರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಯಸಿದ್ದಾರೆ. ಆದ್ದರಿಂದ ಬೆಂಗಳೂರಿಗೆ ಕಾರ್ಯಕ್ರಮ ಸ್ಥಳಾಂತರ ಆಗಿದೆ’ ಎಂದು ತಿಳಿಸಿದರಂತೆ. ಹೀಗಾಗಿ ಹೀಗಾಗಿ ಕೊನೇಕ್ಷಣದಲ್ಲಿ ಚಿಕ್ಕಮಗಳೂರಿನ ಕಾರ್ಯಕ್ರಮವನ್ನು ರದ್ದುಮಾಡಲಾಯಿತು. ನಕ್ಸಲರಿಗೆ ಮತ್ತು ಅವರ ಪೋಷಕರಿಗೆ ಬೆಂಗಳೂರಿಗೆ ತೆರಳಲು ವಿಶೇಷ ವಾಹನದ ವ್ಯವಸ್ಥೆ ಮಾಡಲಾಯಿತು.
ಶೃಂಗೇರಿ ಸಮೀಪದ ಕಡೆಕಲ್ಲು ಮೂಲಕ ಬಾಳೆಹೊನ್ನೂರು ಕಡೆಯಿಂದ ಚಿಕ್ಕಮಗಳೂರಿಗೆ 6 ನಕ್ಸಲರನ್ನು ಮೂರ್ನಾಲ್ಕು ವಾಹನಗಳಲ್ಲಿ ಪೊಲೀಸ್ ಭದ್ರತೆಯೊಂದಿಗೆ ಕರೆತರಲಾಗುತ್ತಿತ್ತು. ಚಿಕ್ಕಮಗಳೂರು ನಗರ ಪ್ರವೇಶಿಸಿದ ನಕ್ಸಲರಿದ್ದ ವಾಹನಗಳು ದಿಢೀರ್ ಬೇಲೂರು ರಸ್ತೆಯ ಮೂಲಕ ಬೆಂಗಳೂರಿನ ಕಡೆ ತೆರಳಿದವು.
ನಂತರ ಮುಖ್ಯಮಂತ್ರಿಗಳ ಗೃಹ ಕಛೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ರಾಜ್ಯದ ನಕ್ಸಲರಾದ ಮುಂಡಗಾರು ಲತಾ, ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲದ ಸುಂದರಿ, ಮಾರಪ್ಪ ಅರೋಳಿ, ವನಜಾಕ್ಷಿ ಬಾಳೆಹೊಳೆ ಹಾಗೂ ಕೇರಳದ ವೈನಾಡಿನ ಎನ್. ಜೀಶಾ ಹಾಗೂ ತಮಿಳುನಾಡಿನ ಕೆ. ವಸಂತ್ ಅವರು ಹಸಿರು ಬಟ್ಟೆ ಕಳಚಿಟ್ಟು, ಕೆಂಪು ಬಾವುಟ ಕೆಳಗಿಟ್ಟು ಶರಣಾದರು.
Comments are closed, but trackbacks and pingbacks are open.