Lucknow: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜೊತೆ ಓಡಿ ಹೋದ ಮಹಿಳೆ

Lucknow: ಮಹಿಳೆಯೊಬ್ಬರು ತನ್ನ ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜೊತೆ ಓಡಿ ಹೋಗಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

 

ಯುಪಿಯ ಹರ್ದೋಯ್‌ ಜಿಲ್ಲೆಯ ಮಹಿಳೆಯೋರ್ವಳು ತನ್ನ ಪತಿ ರಾಜು ಎಂಬಾತನನ್ನು ಬಿಟ್ಟು, ಮನೆಗೆ ಭಿಕ್ಷೆ ಬೇಡಲೆಂದು ಬರುತ್ತಿದ್ದ ಭಿಕ್ಷುಕನ ಜೊತೆ ಓಡಿ ಹೋಗಿದ್ದಾಳೆ. ಇದೀಗ ಪತಿ ರಾಜು ಪೊಲೀಸ್‌ ದೂರು ದಾಖಲು ಮಾಡಿದ್ದಾರೆ.

ಏನಿದು ಘಟನೆ?
ಕಳೆದ ಕೆಲವು ವರ್ಷಗಳಿಂದ ನಾನು ಮತ್ತು ನನ್ನ ಪತ್ನಿ ರಾಜೇಶ್ವರಿ ನಮ್ಮ ಆರು ಮಕ್ಕಳ ಜೊತೆ ಹರ್ದೋಯ್‌ನ ಹರ್ಪಾಲ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ. ನನ್ಹೆ ಪಂಡಿತ್‌ (45) ಎಂಬ ಭಿಕ್ಷುಕ ಭಿಕ್ಷೆ ಬೇಡಲು ನೆರೆಹೊರೆಗೆ ಬರುತ್ತಿದ್ದ. ಈ ಸಮಯದಲ್ಲಿ ನನ್ನ ಪತ್ನಿ ಜೊತೆ ಆತ ಮಾತನಾಡುತ್ತಿದ್ದ. ಇಬ್ಬರೂ ಅನಂತರ ಆತ್ಮೀಯರಾಗಿದ್ದಾರೆ. ಇವರಿಬ್ಬರೂ ಫೋನ್‌ನಲ್ಲಿಯೂ ಮಾತನಾಡುತ್ತಿದ್ದರು ಎಂದು ದೂರಿನಲ್ಲಿ ಪತಿ ರಾಜು ಹೇಳಿದ್ದಾನೆ.

ಜ.3 ರಂದು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ನನ್ನ ಪತ್ನಿ, ನನ್ನ ಮಗಳು ಖುಷ್ಬೂಗೆ ಬಟ್ಟೆ, ತರಕಾರಿ ಖರೀದಿ ಮಾಡಲೆಂದು ಮಾರುಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದು, ಆಕೆ ವಾಪಸು ಬರದೇ ಹೋದ ಕಾರಣ ನಾನು ಎಲ್ಲಾ ಕಡೆ ಹುಡುಕಾಡಿದೆ. ನಾನು ಎಮ್ಮೆ ಮಾರಿ ಬಂದ ಹಣದಿಂದ ನನ್ನ ಪತ್ನಿ ಮನೆಯಿಂದ ಆಚೆ ಹೋಗಿದ್ದು, ಆಕೆ ಪಂಡಿತ್‌ ಜೊತೆ ಹೋಗಿರುವುದು ಎಂಬ ಸಂಶಯ ನನಗಿದೆ ಎಂದು ದೂರಿನಲ್ಲಿ ಪತಿ ಹೇಳಿದ್ದಾನೆ.

ಪೊಲೀಸರು ಪ್ರಕರಣ ದಾಖಲು ಮಾಡಿದ್ದು, ಭಿಕ್ಷುಕ್‌ ನನ್ಹೆ ಪಂಡಿತ್‌ನನ್ನು ಹುಡುಕಾಡುತ್ತಿದ್ದಾರೆ.

Comments are closed, but trackbacks and pingbacks are open.