Mangaluru : ಆಟಿಕೆ ಎಂದುಕೊಂಡು ನಿಜವಾದ ರಿವಲ್ವಾರ್ ಅನ್ನು ಹೊಟ್ಟೆಗೆ ಹಿಡಿದು ಶೂಟ್ ಮಾಡಿಕೊಂಡ ವ್ಯಕ್ತಿ !!
Mangaluru : ವ್ಯಕ್ತಿಯೊಬ್ಬರು ಆಟದ ಸಾಮಾನು ಎಂದು ನಿಜವಾದ ರಿವಾಲ್ವರ್ ನ್ನು ಹಿಡಿದುಕೊಂಡು ಹೊಟ್ಟೆಗೆ ಒತ್ತಿ ಅದರ ಟ್ರಿಗರ್ ಒತ್ತಿದ್ದಾರೆ. ಇದರ ಪರಿಣಾಮ ಹೊಟ್ಟೆಗೆ ಗುಂಡು ಹೊಡೆದು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರಲ್ಲಿ ನಡೆದಿದೆ.
ಹೌದು, ಮಂಗಳೂರು ಹೊರವಲಯದ ವಾಮಂಜೂರಿನಲ್ಲಿ ಈ ರೀತಿಯ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಸಫ್ವಾನ್ ಎಂಬುವವರು ಗುಂಡು ಹೊಡೆದುಕೊಂಡು ಗಾಯಗೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ.
ಅಷ್ಟಕ್ಕೂ ಆಗಿದ್ದೇನು?
ವಾಮಂಜೂರಿನ ಸೆಕೆಂಡ್ ಹ್ಯಾಂಡ್ ಅಂಗಡಿಯೊಂದರಲ್ಲಿ ಭಾಸ್ಕರ್ ಎಂಬವರು ಗನ್ ಅನ್ನು ಟೇಬಲ್ ಮೇಲಿರಿಸಿ ವಾಶ್ ರೂಂ ಗೆಂದು ತೆರಳಿದ್ದರು. ಈ ವೇಳೆ ಸೆಕೆಂಡ್ ಹ್ಯಾಂಡ್ ಬಜಾರ್ ಗೆ ಖರೀದಿಗೆ ಬಂದಿದ್ದ ಸಫ್ವಾನ್ ಎಂಬವರು ಆಟದ ವಸ್ತುವೆಂದು ಭಾವಿಸಿ ಹೊಟ್ಟೆಯ ಮೇಲಿಟ್ಟು ಶೂಟ್ ಮಾಡಿಕೊಂಡಿದ್ದಾರೆ. ಪರಿಣಾಮ ಸಫ್ವಾನ್ ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ.
ಸದ್ಯ ಗಾಯಾಳು ಪಡೀಲ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Comments are closed, but trackbacks and pingbacks are open.