Sullia: ಸುಳ್ಯ ಉತ್ಸವ ವೇದಿಕೆಯಲ್ಲಿ ಹೊಸ ಕನ್ನಡ ಪತ್ರಿಕೆ ಲೋಕಾರ್ಪಣೆ!.
Sullia: ಸುಳ್ಯದ (Sullia) ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದ ಅಂಗವಾಗಿ ನಡೆಸಲಾದ ಸುಳ್ಯ ಉತ್ಸವ ಕಾರ್ಯಕ್ರಮದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಹೊಸ ಕನ್ನಡ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಸುದರ್ಶನ್ ಬೆಳಾಲು ಇವರು ಕಳೆದ 6 ವರ್ಷಗಳಿಂದ ಹೊಸ ಕನ್ನಡ ವೆಬ್ ಸೈಟ್ ನಡೆಸುತ್ತಿದ್ದು, ಇದೀಗ ಇವತ್ತಿನಿಂದ ಪ್ರಿಂಟ್ ಮಾಧ್ಯಮದ ಕಡೆಗೆ ಸಾಗಿರುತ್ತಾರೆ.
ಅಂತೆಯೇ ಪತ್ರಿಕೆಯ ಬಿಡುಗಡೆ ಸಂದರ್ಭದಲ್ಲಿ ಸುದರ್ಶನ್ ಬೆಳಾಲು ಇವರ ಮಾರ್ಗದರ್ಶನದಂತೆ ಚಿತ್ರ ಅವರು ಪತ್ರಿಕೆ ಬಗೆಗಿನ ವಾಗ್ದಾನ ಮಂಡಿಸಿದ್ದು ” ನಮಗೆ ಯಾವುದೂ ಅಸ್ಪೃಶ್ಯವಲ್ಲ. ಬದುಕು ಹೇಗೆ ಎಲ್ಲ ಸ್ವಾರಸ್ಯಗಳ, ತೀರದ ಕುತೂಹಲಗಳ, ಬತ್ತದ ಆಸೆಗಳ, ನಿಲ್ಲದ ಕ್ರೌರ್ಯಗಳ, ದಿನದಿನಕ್ಕೆ ಮೂಡಿ ಬರುವ ವಿಸ್ಮಯಗಳ, ಜತೆಗೆ ನೋವು ದುಃಖ ದುಮ್ಮಾನಗಳ ಕೂಟವೋ, ಹಾಗೆಯೇ ಹೊಸಕನ್ನಡ. ಯಾವುದೇ ಇಸಂಗಳಿಗೆ, ಇದಮಿತ್ಥಂಗಳಿಗೆ ವ್ಯಕ್ತಿಗಳಿಗೆ ನಾವು ಸೀಮಿತರಲ್ಲ. ನಮಗೆ ಎಲ್ಲ ವಿಷಯಗಳೂ ಸಹ್ಯ. ದಿನನಿತ್ಯದ ಆಗು ಹೋಗುಗಳಿಂದ ಶುರುಮಾಡಿ, ಸುಂದರ ಜೀವನದ ಎಲ್ಲಾ ವಿಸ್ಮಯಗಳಿಗೆ ಕಣ್ಣರಳಿಸುವ ಆಸೆ ನಮ್ಮದು. ಬದುಕಿನ ಹಲವು ವಿಸ್ತಾರಗಳಿಗೆ ಕನ್ನಡಿಯಾಗಿ, ದಿಕ್ಕಾಗಿ ದೀಪವಾಗಿ ಮತ್ತು ಅಗತ್ಯ ಬಿದ್ದರೆ ಅಸ್ತ್ರವಾಗಿ ಕೂಡಾ ಹೊಸ ಕನ್ನಡ ಕೆಲಸ ಮಾಡಲಿದೆ. ಪರಿಸ್ಥಿತಿ ಒದಗಿ ನಿಂತರೆ ಜನರ ಚಳವಳಿಗೆ ಇನ್ನಿಲ್ಲದ ಉನ್ಮಾದದಿಂದ ಜೊತೆಯಾಗಿ ನಿಲ್ಲಲಿದೆ” ಎಂದರು.
Comments are closed, but trackbacks and pingbacks are open.