Vishal: ಅರೆ.. ನಟ ವಿಶಾಲ್ ಗೆ ಏನಾಯ್ತು? ಕೈ ನಡುಗುತ್ತಿದೆ, ನಾಲಗೆ ತೊದಲುತ್ತಿದೆ.. !! ವಿಡಿಯೋ ನೋಡಿ ಫ್ಯಾನ್ಸ್ ಗೆ ಶಾಕ್

Vishal: ಕಾಲಿವುಡ್ ನಟ ವಿಶಾಲ್ ಅವರು ಇತ್ತೀಚೆಗೆ ಇವೆಂಟ್ (Event) ಒಂದರಲ್ಲಿ ಕಾಣಿಸಿಕೊಂಡಾಗ ಅವರ ಕೈ ಸಂಪೂರ್ಣವಾಗಿ ನಡುಗುತ್ತಿರುವುದು ಕಂಡು ಬಂದಿದೆ. ಇದನ್ನು ನೋಡಿದ ಅವರ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಹಾಗಿದ್ರೆ ಕಾಲಿವುಡ್ ನಟ ವಿಶಾಲ್​ಗೆ (Vishal) ಏನಾಗಿದೆ?

 

ತಮಿಳಿನಲ್ಲಿ ಮಾಸ್ ಸಿನಿಮಾಗಳನ್ನು ನೀಡಿದ ವಿಶಾಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರಿಗೆ ಇನ್ನೂ 47 ವರ್ಷ. ಇದೀಗ ತಮ್ಮದೇ ಅಭಿನಯದ ಮದ ಗಜ ರಾಜ ಸಿನಿಮಾ ರಿಲೀಸ್ ಸಂಭ್ರಮದಲ್ಲಿದ್ದಾರೆ. ಇದೇ ಸಿನಿಮಾದ ಪ್ರಮೋಷನ್ ಕಾರ್ಯಕ್ರಮಕ್ಕೆ ಅವರು ಬಂದಿದ್ದರು. ವೇದಿಕೆಯಲ್ಲಿ ಅವರನ್ನು ಕರೆದು ಮಾತನಾಡಲು ಮೈಕ್ ನೀಡಿದಾಗ ವಿಶಾಲ್ ಅಕ್ಷರಶಃ ನಡುಗುತ್ತಿದ್ದರು. ಕೊನೆಗೆ ಅವರು ಎದ್ದು ನಿಲ್ಲಲೂ ಆಗುತ್ತಿಲ್ಲ ಎಂದಾಗ ಸಹಾಯಕರು ಬಂದು ಅವರನ್ನು ಸೋಫಾ ಮೇಲೆ ಕೂರಿಸಿದರು. ಬಳಿಕ ಕುಳಿತುಕೊಂಡೇ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ಆದ ವಿಡಿಯೋದಲ್ಲಿ ಸಿನಿಮಾದ ಬಗ್ಗೆ ಮಾತನಾಡುವಾಗ ಅವರ ಕೈಗಳು ನಡಗುತ್ತಿರುವುದು ಹಾಗೂ ಮಾತನಾಡಲು ತೊದಲಿದ್ದಾರೆ. ಅಲ್ಲದೆ ತೀವ್ರವಾಗಿ ಆಯಾಸ ಹಾಗೂ ನಿಶಕ್ತರಾಗಿರುವಂತೆ ವಿಡಿಯೋದಲ್ಲಿ ಇದೆ. ಅವರು ಸ್ಟೇಜ್‌ ಮೇಲೆ ಮಾತನಾಡುವುದಕ್ಕೆ ಕಷ್ಟಪಡುತ್ತಿರುವುದನ್ನು ನೋಡಿರುವ ನಿರೂಪಕರು ಸ್ಟೇಜ್‌ ಮೇಲೆ ಸಂವಾದವನ್ನು ಮಾಡುವಂತೆ ಕಾರ್ಯಕ್ರಮವನ್ನು ತುಸು ಬದಲಾಯಿಸಿದ್ದಾರೆ. ಅವರು ಕುಳಿತುಕೊಳ್ಳುವಾಗಲೂ ತಮಿಳಿನ ಇನ್ನೊಬ್ಬ ನಟರು ಸಹಾಯ ಮಾಡಿರುವುದು ವಿಡಿಯೋದಲ್ಲಿ ಇದೆ.

ಇದನ್ನು ನೋಡಿ ಅಭಿಮಾನಿಗಳು ವಿಶಾಲ್ ಗೆ ನಿಜವಾಗಿಯೂ ಏನಾಗಿದೆ? ಯಾಕೆ ಅವರು ಹೀಗೆ ನಡುಗುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಮೂಲಗಳ ಪ್ರಕಾರ ಅವರಿಗೆ ತೀವ್ರ ಜ್ವರವಿತ್ತು. ಹಾಗಿದ್ದರೂ ಸಿನಿಮಾ ಪ್ರಮೋಷನ್ ಗೆ ತೊಂದರೆಯಾಗಬಾರದು ಎಂದು ಬಂದಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಬಂದಿಲ್ಲ. ಆರೋಗ್ಯ ಸಮಸ್ಯೆಯ ನಡುವೆಯೂ ಅವರು ಕಾರ್ಯಕ್ರಮಕ್ಕೆ ಬಂದಿರುವ ಬಗ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಇಷ್ಟೊಂದು ಆರೋಗ್ಯ ಸಮಸ್ಯೆ ಇರುವಾಗ ಅವರು ಬರಬಾರದಿತ್ತು. ಆರೋಗ್ಯ ಕಾಳಜಿ ಮಾಡಬೇಕು ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಅಂದಹಾಗೆ ವಿಶಾಲ್, ಸಂತಾನಂ, ವರಲಕ್ಷ್ಮಿ, ಸತೀಶ್, ನಿತಿನ್ ಸತ್ಯ, ಸೋನುಸೂದ್, ಅಂಜಲಿ, ದಿವಂಗತ ನಟರಾದ ಮಣಿವಣ್ಣನ್, ಮನೋಬಾಲಾ, ಮೈಲಸ್ವಾಮಿ, ಚಿಟ್ಟಿಬಾಬು ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ‘ಮದಗಜರಾಜ’ ಚಿತ್ರವನ್ನು ಜೆಮಿನಿ ಫಿಲ್ಮ್ ಸರ್ಕ್ಯೂಟ್ ನಿರ್ಮಿಸಿದೆ.

Comments are closed, but trackbacks and pingbacks are open.