Shivamogga: ಕಹಿ ಸ್ವೀಟ್‌ ಬಾಕ್ಸ್‌ ಕಳುಹಿಸಿದ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌; ಸೇಡಿಗಾಗಿ ಕೃತ್ಯ ಮಾಡಿದ್ದ ಲಾಯರ್‌!

Share the Article

Shivamogga: ಡಾ.ಧನಂಜಯ ಸರ್ಜಿ ಹೆಸರಿನಲ್ಲಿ ಕಹಿ ಸ್ವೀಟ್‌ ಬಾಕ್ಸ್‌ ಕಳುಹಿಸಿದ್ದು, ಈ ಘಟನೆ ಸಂಬಂಧ ಆರೋಪಿ ಸೌಹಾರ್ದ ಪಟೇಲ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಮೂವರು ಗಣ್ಯರನ್ನು ಟಾರ್ಗೆಟ್‌ ಮಾಡಿ ಸ್ವೀಟ್‌ ಬಾಕ್ಸ್‌ ಕಳುಹಿಸಿದ್ದ ಎನ್ನುವ ಮಾಹಿತಿಯಿದೆ.

ಆರೋಪಿ ಸೌಹಾರ್ದ್‌ ಎಲ್‌ಎಲ್‌ಬಿ ಮುಗಿಸಿದ್ದು, ಲಾಯರ್‌ ಆಗಿದ್ದ. ಎನ್‌ಇಎಸ್‌ ಕಾರ್ಯದರ್ಶಿ ನಾಗರಾಜ್‌, ಮಾನಸಿಕ ವೈದ್ಯರಾದ ಡಾ.ಅರವಿಂದ್‌ ಮತ್ತು ಡಾ.ಕೆ.ಎಸ್‌ ಪವಿತ್ರ ಎಂಬುವವರನ್ನು ಟಾರ್ಗೆಟ್‌ ಮಾಡಿ ಸರ್ಜಿ ಹೆಸರಿನಲ್ಲಿ ಸ್ವೀಟ್‌ ಬಾಕ್ಸ್‌ ಕಳುಹಿಸಿದ್ದ. ಆರೋಪಿ ಸೌಹಾರ್ದ ಪಟೇಲ್‌ ಮಾನಸಿಕ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ. ವೈದ್ಯರೊಬ್ಬರ ಮಗಳನ್ನು ವಿದ್ಯಾಭ್ಯಾಸದ ಸಮಯದಲ್ಲಿ ಲವ್‌ ಮಾಡುತ್ತಿದ್ದ. ಆದರೆ ಪ್ರೀತಿಸುತ್ತಿದ್ದ ಯುವತಿಯನ್ನು ನಾಗರಾಜ್‌ ಅವರು ದೂರ ಮಾಡಿದ್ದರು. ಅನಂತರ ಖಿನ್ನತೆಗೆ ಒಳಗಾಗಿದ್ದ ಆರೋಪಿ ಸೌಹಾರ್ದ್‌ ಪಟೇಲ್‌ ಮಾನಸಿಕ ರೋಗ ತಜ್ಞರಾದ ಅರವಿಂದ್‌, ಕೆ.ಎಸ್‌.ಪವಿತ್ರ ಬಳಿ ಚಿಕಿತ್ಸೆ ಪಡೆದಿದ್ದ.

ಸೌಹಾರ್ದ ಪಟೇಲ್‌ನನ್ನು ತೊರೆದು ಆತನ ತಂದೆ ತಾಯಿ ಬೇರೆ ಕಡೆ ವಾಸ ಮಾಡುತ್ತಿದ್ದರು. ಆದರೆ ಮಾನಸಿಕ ರೋಗಿಯಾಗಿದ್ದ ಸೌಹಾರ್ದ ಪಟೇಲ್‌ ನನಗೆ ಮಾತ್ರೆಗಳ ಮೇಲೆ ಮಾತ್ರೆ ನೀಡಿದ್ದರಿಂದ ವೈದ್ಯರ ಮೇಲೆ ಸಿಟ್ಟುಗೊಂಡಿದ್ದ. ಹೀಗಾಗಿ ಎಲ್ಲಾ ಮಾತ್ರೆಗಳನ್ನು ಪುಡಿಮಾಡಿ ಸ್ವೀಟ್‌ ಬಾಕ್ಸ್‌ನಲ್ಲಿ ಹಾಕಿ ಸರ್ಜಿ ಹೆಸರಿನಲ್ಲಿ ಈ ಮೂವರಿಗೆ ಕಳುಹಿಸಿದ್ದ.

ಸದ್ಯಕ್ಕೆ ಕೋಟೆ ಪೊಲೀಸರ ವಶದಲ್ಲಿ ಆರೋಪಿ ಸೌಹಾರ್ದ್‌ ಪಟೇಲ್‌ ಇದ್ದಾನೆ.

Comments are closed.