Kolara: ಬೆಚ್ಚಿ ಬೀಳಿಸುವ ಘಟನೆ – ಪ್ರೇಯಸಿಯ ಮನೆಯಿಂದ ಬರುತ್ತಿದ್ದ ಯುವಕನನ್ನು ಅಟ್ಟಾಡಿಸಿ ಕೊಲೆ !!

Kolara: ಕೋಲಾರದಲ್ಲೊಂದು ಬೆಚ್ಚಿ ಬೇಳಿಸುವಂತಹ ಘಟನೆ ಬೆಳಕಿಗೆ ಬಂದಿದ್ದು ರಾತ್ರಿ ವೇಳೆ ತನ್ನ ಪ್ರೇಯಸಿಯನ್ನು ಭೇಟಿಯಾಗಿ ಮನೆಯಿಂದ ಹೊರ ಬರುತ್ತಿದ್ದ ಯುವಕನನ್ನು ಅಟ್ಟಾಡಿಸಿ ಕೊಲೆ ಮಾಡಿದಂತಹ ಪ್ರಕರಣ ನಡೆದಿದೆ.
28 ವರ್ಷದ ಉಸ್ಮಾನ್ ಸಾವಿಗೀಡಾದ ಯುವಕ. ಹಲ್ಲೆಯ ಬಳಿಕ ಈತ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಅಷ್ಟಕ್ಕೂ ಆಗಿದ್ದೇನು?
5 ವರ್ಷದ ಹಿಂದೆ ಜಬಿನಾ ಎಂಬುವರನ್ನು ಪ್ರೀತಿಸಿ ಮದುವೆಯಾಗಿದ್ದ. ಕಿಡ್ನಿ ವೈಫಲ್ಯವಾಗಿ ಜಬಿನಾ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ನೋಡಲು ಬಂದಿದ್ದ ಸಂಬಂಧಿ ಯುವತಿಯನ್ನು ಉಸ್ಮಾನ್ ಪ್ರೀತಿಸಲು ಆರಂಭಿಸಿದ್ದ. ಈ ವಿಚಾರ ಗೊತ್ತಾಗಿ ಪತ್ನಿ ಜಬಿನಾ ಮಹಿಳಾ ಠಾಣೆಗೆ ದೂರು ನೀಡಿದ್ದು, ಉಸ್ಮಾನ್ ನಿಂದ ದೂರವಾಗಿ ತವರಿಗೆ ಹೋಗಿದ್ದರು.
ಹೀಗಿರುವಾಗ ನಿನ್ನೆ ರಾತ್ರಿ ಉಸ್ಮಾನ್ ಯುವತಿ ನಿವಾಸಕ್ಕೆ ಹೋಗಿದ್ದ. ಪ್ರೇಯಸಿ ಮನೆಯಿಂದ ವಾಪಸ್ ಬರುವಾಗ ರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಕೋಲಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Comments are closed.