Dharmasthala: ನದಿಗೆ ಜಾನುವಾರು ತಲೆ ಹಾಗೂ ತ್ಯಾಜ್ಯ ಎಸೆತ ಪ್ರಕರಣ; ಇಬ್ಬರ ಬಂಧನ

Dharmasthala: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಅನ್ನಾರು ಸೇತುವೆಯ ಕೆಳಭಾಗದಲ್ಲಿ ಮೃತ್ಯುಂಜಯ ನದಿ ಕಿನಾರೆಯಲ್ಲಿ ಡಿ.17 ರಂದು ಯಾರೋ ಕಿಡಿಗೇಡಿಗಳು ಹತ್ಯೆಗೈಯಲ್ಪಟ್ಟ ಜಾನುವಾರುಗಳ ತಲೆ ಹಾಗೂ ಇತರೇ ತ್ಯಾಜ್ಯಗಳನ್ನು ಸುಮಾರು 11 ಸಣ್ಣ ಸಣ್ಣ ಪ್ಲಾಸ್ಟಿಕ್ ಗೋಣಿ ಚೀಲಗಳಲ್ಲಿ ತುಂಬಿಸಿ‌ ಎಸೆದು ಹೋಗಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಧರ್ಮಸ್ಥಳ ಪೊಲೀಸರು ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ದಸ್ತಗಿರಿ ಮಾಡಿದ್ದಾರೆ

 

ಬೆಳ್ತಂಗಡಿಯ ಆದಂ ಅವರ ಮಗ ಮಹಮ್ಮದ್ ಇರ್ಷಾದ್ (28 ವರ್ಷ), ರವೂಫ್‌ ಅವರ ಮಗ ಮಹಮ್ಮದ್ ಅಜ್ಮಲ್ (30 ವರ್ಷ) ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇವರ ಮೇಲೆ ಪೊಲೀಸರು ಠಾಣಾ ಅಕ್ರ 79/2024 ಕಲಂ 4, 12 ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲು ಮಾಡಲಾಗಿದೆ.

ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

Comments are closed, but trackbacks and pingbacks are open.