Bigg Notes: ಭಾರತದಲ್ಲಿ 24 ವರ್ಷ ಚಲಾವಣೆಯಲ್ಲಿದ್ದವು 5, 10 ಸಾವಿರ ಮುಖಬೆಲೆಯ ನೋಟುಗಳು !! ಯಾವಾಗ? ಬ್ಯಾನ್ ಮಾಡಿದ್ದೀಕೆ ?

Bigg Notes: RBI ₹2000ನೋಟುಗಳನ್ನು ಹಿಂಪಡೆಯಲಾಗಿರುವುದರಿಂದ ದೊಡ್ಡ ಮೌಲ್ಯದ ನೋಟು ಚಲಾವಣೆಯಲ್ಲಿಲ್ಲ. ಈಗ ಭಾರತದಲ್ಲಿ ಅತಿ ದೊಡ್ಡ ನೋಟು ₹500. ಅದರೀಗ ಭಾರತೀಯ ರಿಸರ್ವ್ ಬ್ಯಾಂಕ್ ₹5000 ನೋಟನ್ನು ತರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರ್‌ಬಿಐ ಈ ಕುರಿತು ಸ್ಪಷ್ಟೀಕರಣ ನೀಡಿದ್ದು 5,000 ಮುಖಬೆಲೆಯ ನೋಟುಗಳನ್ನು ತರುವ ಯಾವ ಉದ್ದೇಶವು ನಮ್ಮ ಮುಂದೆ ಇಲ್ಲ ಎಂದು ತಿಳಿಸಿದೆ.

 

ಆದರೆ ನಿಮಗೆ ಗೊತ್ತಾ? ಭಾರತದಲ್ಲಿ ಬರೋಬ್ಬರಿ 24 ವರ್ಷ ಐದು ಮತ್ತು ಹತ್ತು ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿ ಇದ್ದವು ಎಂಬುದು? ಹೌದು, ಭಾರತಕ್ಕೆ ಸ್ವಾತಂತ್ರ ಬಂದ ಬಳಿಕ 5 ಮತ್ತು 10 ಬಾರಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಆದರೆ ನಂತರದಲ್ಲಿ ಆ ನೋಟುಗಳನ್ನು ಬ್ಯಾನ್ ಮಾಡಲಾಯಿತು. ಹಾಗಿದ್ದರೆ ಯಾವ ಸಮಯದಲ್ಲಿ ಈ ನೋಟುಗಳು ಚಲಾವಣೆಯಲ್ಲಿದ್ದವು? ಅದನ್ನು ಬ್ಯಾನ್ ಮಾಡಿದವರು ಯಾರು? ಯಾಕೆ? ಇಲ್ಲಿದೆ ನೋಡಿ ಡೀಟೇಲ್ಸ್

ಹೌದು, ಅಧಿಕ ಮೌಲ್ಯದ ನೋಟುಗಳು ಭಾರತಕ್ಕೆ ಹೊಸದಲ್ಲ. 5,000 ರೂ., 10,000 ರೂ. ಹೀಗೆ ಅತಿ ಹೆಚ್ಚು ಮೌಲ್ಯದ ನೋಟುಗಳು ಭಾರತದಲ್ಲಿ ಇದ್ದವು ಎಂಬುದು ಇವತ್ತು ಬಹಳಷ್ಟು ಜನಕ್ಕೆ ಗೊತ್ತಿಲ್ಲ. ಈ 5,000 ರೂ., 10,000 ರೂ. ನೋಟುಗಳು ಭಾರತದ ಆರ್ಥಿಕ ಇತಿಹಾಸದಲ್ಲಿ ಒಂದು ವಿಶೇಷ ಸ್ಥಾನ ಪಡೆದಿವೆ. ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲೇ 10,000 ರೂ. ನೋಟು ಇತ್ತು. 1938ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮೊದಲ 10,000 ರೂ. ನೋಟನ್ನ ಬಿಡುಗಡೆ ಮಾಡಿತ್ತು. ನಂತರ ಕಪ್ಪು ಹಣದ ದುರ್ಬಳಕೆಯಿಂದಾಗಿ ಈ ನೋಟುಗಳನ್ನು ರದ್ದು ಮಾಡಲಾಯಿತು. ಆದರೆ ನಂತರ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ 1957 ರಲ್ಲಿ 10,000 ರೂ., 5,000 ರೂ. ನೋಟುಗಳನ್ನ ಮತ್ತೆ ಚಲಾವಣೆಗೆ ತರಲಾಯಿತು. ಒಟ್ಟಾರೆ ಸುಮಾರು 24 ವರ್ಷಗಳ ಕಾಲ ದೊಡ್ಡ ನೋಟುಗಳು ಚಲಾವಣೆಯಲ್ಲಿದ್ದವು.

ಬ್ಯಾನ್ ಮಾಡಿದ್ದೇಕೆ?
ಹೆಚ್ಚು ಮೌಲ್ಯದ ಈ ನೋಟುಗಳು ಸಾಮಾನ್ಯ ಜನರ ಬಳಕೆಗೆ ಅನಗತ್ಯ ಅಂತ ಹಾಗೂ ವ್ಯಾಪಾರ ಮತ್ತು ಕಪ್ಪು ಹಣ ವಹಿವಾಟುಗಳಲ್ಲಿ ಹೆಚ್ಚಾಗಿ ಬಳಕೆಯಾಗ್ತಿದೆ ಅಂತ ಆರೋಪಗಳು ಕೇಳಿಬಂದವು. ಹೀಗಾಗಿ 1978ರಲ್ಲಿ ಮೊರಾರ್ಜಿ ದೇಸಾಯಿ ಸರ್ಕಾರ ದೊಡ್ಡ ನೋಟುಗಳನ್ನು ರದ್ದು ಮಾಡಿದಾಗ ₹1000, ₹5000, ₹10000 ನೋಟುಗಳು ರದ್ದಾದವು.

Leave A Reply

Your email address will not be published.