Tejasvi Surya: ಸಂಸದ ತೇಜಸ್ವಿ ಸೂರ್ಯಗೆ ಕಂಕಣಭಾಗ್ಯ

Tejasvi Surya: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮಾರ್ಚ್‌ 4 ರಂದು ಸಿವಶ್ರೀ ಜೊತೆ ಹಸೆಮಣೆ ಏರಲಿದ್ದಾರೆ. ಸಿವಶ್ರೀ ಅವರು ಚೆನ್ನೈ ಮೂಲದವರು ಹಾಗೂ ಇವರು ಗಾಯಕಿ.

 

ಯಂಗ್‌ ಆಂಡ್‌ ಡೈನಾಮಿಕ್‌ ಮತ್ತು ಎಲಿಜಬಲ್‌ ಬ್ಯಾಚುಲರ್‌ ಸಂಸದ ಎಂದೇ ಕರೆಯಿಸಿಕೊಂಡಿರುವ ತೇಜಸ್ವಿ ಸೂರ್ಯ ಅವರಿಗೆ ಮದುವೆ ಯಾವಾಗ ಎನ್ನುವ ಕುರಿತು ಅನೇಕ ಪ್ರಶ್ನೆಗಳು ಬಹಳ ದಿನದಿಂದ ಕೇಳಿ ಬರುತ್ತಿತ್ತು.

ಇದೀಗ ಸಂಸದ ತೇಜಸ್ವಿ ಅವರಿಗೆ ಮದುವೆ ಭಾಗ್ಯ ಕೂಡಿ ಬಂದಿದೆ.

ಶಿವಶ್ರೀ ಸ್ಕಂದ ಪ್ರಸಾದ್‌ ಅವರು ಚೆನ್ನೈ ಮೂಲದವರು. ಇವರು ಗಾಯಕಿ ಮಾತ್ರವಲ್ಲದೇ ಭರತನಾಟ್ಯ ಕಲಾವಿದೆ ಕೂಡಾ ಆಗಿದ್ದಾರೆ. ಜೈವಿಕ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಚೆನ್ನೈ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಿಂದ ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿದ್ದಾರೆ.

ಶಿವಶ್ರೀ ಸ್ಕಂದ ಪ್ರಸಾದ್‌ ಅವರು ಸೈಕ್ಲಿಂಗ್‌, ಟ್ರೆಕ್ಕಿಂಗ್‌ನಲ್ಲಿ ಆಸಕ್ತಿ ಹೊದಿದ್ದು, ಇವರು ಪೊನ್ನಿಯನ್‌ ಸೆಲ್ವನ್‌ ಪಾರ್ಟ್‌-2 ಚಿತ್ರದ ಕನ್ನಡ ಭಾಷೆಯ ಹಾಡನ್ನು ಹಾಡಿದ್ದಾರೆ. ಯೂಟ್ಯೂಬ್‌ ಚಾನೆಲ್‌ ಹೊಂದಿದ್ದು ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

Leave A Reply

Your email address will not be published.