Snake bite: ಹಾವು ಕಚ್ಚಿದಾಗ ಈ ವಸ್ತು ತಿಂದರೆ ತಿಂದರೆ ವಿಷ ಹರಡುವುದಿಲ್ಲವಂತೆ !! ಹಾಗಿದ್ರೆ ಏನದು?
Snake bite: ಭೂಮಿಯ ಮೇಲೆ ಹಲವು ಬಗೆಯ ಹಾವುಗಳಿವೆ. ಆದರೆ ಇವುಗಳಲ್ಲಿ ಶೇಕಡಾ 20 ರಷ್ಟು ಹಾವುಗಳು ಮಾತ್ರ ವಿಷಪೂರಿತವಾಗಿವೆ, ಹೆಚ್ಚಿನ ಸಂದರ್ಭಗಳಲ್ಲಿ ವಿಷಕಾರಿಯಲ್ಲದ ಹಾವುಗಳು ಕಚ್ಚಿದರೂ, ಅವು ಹೆದರಿ ತಮ್ಮ ಪ್ರಾಣವನ್ನು ತೆಗೆದುಕೊಳ್ಳುತ್ತವೆ. ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹಾವು ಕಡಿದು( Snake bite)ಸಾಯುವಂತಹ ಪ್ರಕರಣಗಳು ಹೆಚ್ಚಾಗುತ್ತಿದೆ.
ವಿಷಪೂರಿತ ಹಾವುಗಳು ಕಚ್ಚಿದಾಗ ಸಹಜವಾಗಿ ಎಲ್ಲರಿಗೂ ಭಯ ಉಂಟಾಗುತ್ತದೆ. ಏಕೆಂದರೆ ಅದು ನಮ್ಮ ಪ್ರಾಣವನ್ನೇ ತೆಗೆದುಬಿಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಅಂತಹ ಹಾವುಗಳು ಕಚ್ಚಿದಾಗ ಏನು ಮಾಡಬೇಕು. ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ತುಂಬಾ ಮುಖ್ಯವಾಗಿದೆ. ಹಾವು ಕಡಿದಾಗ ಏನು ಮಾಡಬೇಕೆಂದು ನಾವು ಚಿಕ್ಕಲಿನಿಂದಲೂ ಕೂಡ ಕಲಿಯುತ್ತಾ ಬಂದಿದ್ದೇವೆ. ಹೀಗಾಗಿ ಮೊದಲು ಯಾವೆಲ್ಲ ಪ್ರಥಮ ಚಿಕಿತ್ಸೆಗಳನ್ನು ಮಾಡಬೇಕೆಂದು ತಕ್ಕಮಟ್ಟಿಗೆ ಹಲವರಿಗೆ ತಿಳಿದಿದೆ.
ಆಯುರ್ವೇದ ತಜ್ಞರ ಪ್ರಕಾರ, ಹಾವು ಕಚ್ಚಿದವರಿಗೆ ತುಪ್ಪವನ್ನು ತಕ್ಷಣ ತಿನ್ನಿಸಬೇಕು ಮತ್ತು ವಿಷವು ಒಳಗೆ ಹರಡುವುದನ್ನು ತಡೆಯಲು ವಾಂತಿ ಮಾಡಬೇಕು. ಅದೂ ಅಲ್ಲದೆ ಹಾವು ಕಚ್ಚಿದ ವ್ಯಕ್ತಿಗೆ 10 ರಿಂದ 15 ಬಾರಿ ಬೆಚ್ಚನೆಯ ಆಹಾರ ನೀಡಿ ವಾಂತಿ ಬರುವಂತೆ ಮಾಡಬೇಕು ಎಂದು ಹೇಳಲಾಗಿದೆ.
ಇಷ್ಟು ಮಾತ್ರವಲ್ಲದೆ ಹಾವು ಕಚ್ಚಿದಾಗ ನೀವು ಒಬ್ಬರೇ ಇದ್ದರೆ. ತಕ್ಷಣ 108 ಅಥವಾ 112 ಗೆ ಕರೆ ಮಾಡಿ. ನೀವು ಒಬ್ಬಂಟಿಯಾಗಿಲ್ಲದಿದ್ದರೆ, ನಿಮ್ಮ ಸುತ್ತಮುತ್ತಲಿನವರ ಸಹಾಯದಿಂದ ನೀವು ಸಾಧ್ಯವಾದಷ್ಟು ಬೇಗ ಆಸ್ಪತ್ರೆಗೆ ತಲುಪಬೇಕು. ಆಸ್ಪತ್ರೆಗೆ ತೆರಳಿದ ತಕ್ಷಣ ಹಾವು ಕಚ್ಚಿರುವ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಬೇಕು. ಅಂದರೆ, ಹಾವಿನ ಬಣ್ಣ, ಉದ್ದ, ಪಟ್ಟೆಗಳು, ಕತ್ತಿನ ಗೆರೆಗಳು ಇತ್ಯಾದಿ.. ಈ ಎಲ್ಲ ಮಾಹಿತಿ ನೀಡುವುದರಿಂದ ವೈದ್ಯರಿಗೆ ಚಿಕಿತ್ಸೆ ನೀಡಲು ಸುಲಭವಾಗುತ್ತದೆ.
ಇನ್ನು ಹಾವು ಕಚ್ಚಿದ ತಕ್ಷಣ ಯಾರೂ ಸಾಯುವುದಿಲ್ಲ. ಅದರ ವಿಷ ದೇಹದ ತುಂಬ ಹರಿದಾಗ ಮಾತ್ರ ಆಪತ್ತು ಎದುರಾಗುತ್ತದೆ. ಸಾಮಾನ್ಯವಾಗಿ ಹಾವು ಕಚ್ಚಿದ ನಂತರ ಒಬ್ಬ ವ್ಯಕ್ತಿ ತುಂಬಾ ಭಯಪಡುತ್ತಾನೆ. ಹಾಗಾಗಿ ಅವನ ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ವಿಷವು ದೇಹದಾದ್ಯಂತ ಹರಡುತ್ತದೆ. ಹಾವು ಕಚ್ಚಿದಾಗ ವಿಷ ದೇಹದ ತುಂಬ ಹರಡಬಾರದು, ಜೀವಕ್ಕೆ ಆಪತ್ತು ತಂದುಕೊಳ್ಳಬಾರದು ಎಂದರೆ ಮೊದಲು ನೀವು ಶಾಂತವಾಗಿರುವುದು ಬಹಳ ಮುಖ್ಯ. ಆದುದರಿಂದಲೇ ತಜ್ಞರು, ಹಾವು ಕಚ್ಚಿದಾಗ ಗಾಬರಿಯಾಗಬೇಡಿ ಆದಷ್ಟು ನಿರ್ಭೀತಿಯಿಂದಿರಿ ಎಂದು ಹೇಳುತ್ತಾರೆ.
9dwogv