Mangaluru : ನ್ಯೂ ಇಯರ್ ಸೆಲೆಬ್ರೇಶನ್ ಗೆ ಹಿಂದೂ ಸಂಘಟನೆಗಳ ವಿರೋಧ – ಇಸ್ರೇಲ್ ಸಜಂಕಾ ಡಿಜೆ ಪಾರ್ಟಿ ರದ್ದು

Mangaluru : 2025 ಹೊಸ ವರ್ಷ (New Year) ಸಂಭ್ರಮಾಚರಣೆಗೆ ದಿನಗಣನೆ ಶುರುವಾಗಿದೆ. ಕಡಲನಗರಿ ಮಂಗಳೂರಿನಲ್ಲಿ(Mangaluru) ಹೊಸ ವರ್ಷಾಚರಣೆಗೆ ಮೊದಲೇ ಪಾರ್ಟಿ ಆಯೋಜನೆ ಮಾಡಲಾಗಿದೆ. ಆದರೆ ಇದೀಗ ಈ ನ್ಯೂ ಇಯರ್ ಪಾರ್ಟಿಗೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಈ ಬೆನ್ನಲ್ಲೆ ಹೊಸ ವರ್ಷದ ಆಚರಣೆಗಾಗಿ ಆಯೋಜಿಸಲಾಗಿದ್ದ ಪ್ರಸಿದ್ಧ ಡಿಜೆ ಸಜಂಕಾ ಅವರ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.

 

ಹೌದು, ಕಡಲನಗರಿ ಮಂಗಳೂರಿನಲ್ಲಿ ನ್ಯೂ ಇಯರ್ ಆಚರಣೆಗೂ ಮೊದಲೇ ಪಾರ್ಟಿಗಳಿಗೆ ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಇಸ್ರೇಲ್ ಮೂಲದ ಪ್ರಖ್ಯಾತ ಸಂಗೀತಗಾರ ಸಜಂಕಾ ಡಿಜೆ ಕುಣಿತದಲ್ಲಿ ಹಿಂದೂ ದೇವರ ಅವಹೇಳನ ಆರೋಪ ಕೇಳಿಬಂದಿತ್ತು. ಹೀಗಾಗಿ ಭಜರಂಗದಳ, ಹಿಂದೂ ಜಾಗರಣಾ ವೇದಿಕೆಯಿಂದ ಕಾರ್ಯಕ್ರಮ ತಡೆಯುವ ಎಚ್ಚರಿಕೆ ನೀಡಿತ್ತು. ಮಂಗಳೂರು ಪೊಲೀಸರಿಗೂ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಸಂಘಟನೆಗಳು ಮನವಿ ಮಾಡಿದ್ದವು. ಹೀಗಾಗಿ ಸಜಂಕಾ ಅವರ ಕಾರ್ಯಕ್ರಮವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ಕಾರಣ ಕಾರ್ಯಕ್ರಮ ರದ್ದಾಗಿರುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಇನ್ನು ಸಜಂಕಾ ಕಾರ್ಯಕ್ರಮ ನಡೆದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸಜಂಕಾ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ಸಜಂಕಾ ಅವರು ಶುಕ್ರವಾರ ಮಂಗಳೂರಿಗೆ ಆಗಮಿಸಿದ್ದರೂ ಕಾರ್ಯಕ್ರಮ ನೀಡದೆ ಹೊಟೇಲ್‌ನಲ್ಲೇ ವಾಸ್ತವ್ಯವಿದ್ದರು.

Leave A Reply

Your email address will not be published.