C T Ravi: ಸಿಟಿ ರವಿ ತಲೆಗೆ ಹೊಡೆದು ಗಾಯ ಮಾಡಿದ್ದು ಯಾರು? ಕೊನೆಗೂ ಸತ್ಯ ರಿವಿಲ್

C T Ravi: ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಮಾಜಿ ಸಚಿವ ಸಿ.ಟಿ. ರವಿ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಸಿಟಿ ರವಿ(C T Ravi) ಅಶ್ಲೀಲ ಪದ ಉಪಯೋಗಿಸಿದ್ದಾರೆ ಎಂಬ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಹೆಬ್ಬಾಳ್ಕರ್ ಅವರು ಭಾರಿ ರೊಚ್ಚಿಗೆದ್ದಿದ್ದು ನನಗೆ ನ್ಯಾಯ ಸಿಗುವವರೆಗೂ ನಾನು ಸುಮ್ಮನಿರುವವಳಲ್ಲ ಎಂದು ಶಪಥ ಮಾಡಿದ್ದಾರೆ. ಅಲ್ಲದೆ ಈ ವಿಚಾರ ಇದೀಗ ಆಣೆ ಪ್ರಮಾಣದ ಮಾತು ಕೇಳಿ ಬಂದಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದ(Dharmasthala) ಮಂಜುನಾಥನ ಸನ್ನಿಧಿವರೆಗೂ ಹೋಗಿದೆ. ಇದರ ನಡುವೆ ಜನರಿಗೆಲ್ಲರಿಗೂ ಕಾಡುತ್ತಿದ್ದ ಪ್ರಶ್ನೆ ಸಿಟಿ ರವಿ ಅವರ ತಲೆಗೆ ಹಲ್ಲೆ ಮಾಡಿದ್ದು ಯಾರು? ಅವರ ತಲೆಗೆ ಗಾಯ ಹೇಗಾಯಿತು? ಎಂಬುದಾಗಿ. ಆದರೆ ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಟಿ ರವಿ ಅವರೇ ಮೌನ ಮುರಿದಿದ್ದಾರೆ. ತಮ್ಮ ತಲೆಗೆ ಹೇಗೆ ಪೆಟ್ಟಾಯಿತು ಎಂಬುದರ ಬಗ್ಗೆ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

ಯಸ್, ಸಿಟಿ ರವಿ ತಲೆಗೆ ಯಾರು ಹೊಡೆದಿದ್ದಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಈ ಬಗ್ಗೆ ಮಾತನಾಡಿರುವ ಸಿಟಿ ರವಿ ಅವರು, ಸದನದ ಒಳಗಡೆ ಹಾಗೂ ಹೊರಗಡೆ ಏನಾಗಿದೆ ಅಂತ ಎಲ್ಲರಿಗೂ ಗೊತ್ತು. ಅಲ್ಲಿ ಎಲ್ಲಾ ಕಡೆ ಕ್ಯಾಮೆರಾಗಳು ಇವೆ. ನನ್ನ ಮೇಲೆ ಹಲ್ಲೆ ಮಾಡಿದವರು ಯಾರೂ ಅಪರಿಚಿತರಲ್ಲ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಪಿಎ ಅವರೊಂದಿಗೆ ಇದ್ದವರೇ ನನಗೆ ಹೊಡೆದಿದ್ದಾರೆ ಎಂದು ಎಂಎಸ್‌ಸಿ ಸಿಟಿ ರವಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ನನ್ನಗೆ ಯಾರು ಹೊಡೆದರೊ ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಡಿಸೆಂಬರ್‌ 19ಕ್ಕೇ ನಾನು ದೂರು ಕೊಟ್ಟಿದ್ದೇನೆ. ಆದರೆ, ಪೊಲೀಸರು ಇಲ್ಲಿಯ ವರೆಗೆ ಎಫ್‌ಐಆರ್‌ ಮಾಡಿಕೊಂಡಿಲ್ಲ. 10 ಜನರನ್ನ ವಶಕ್ಕೆ ತೆಗೆದುಕೊಂಡಿದ್ದರು ಆ ಮೇಲೆ ಅವರನ್ನೂ ಬಿಟ್ಟು ಕಳುಹಿಸಿದ್ದಾರೆ. ಹೀಗಾಗಿ ಈ ಕೇಸ್‌ನಲ್ಲಿ ಕಮಿಷನರ್‌ ಅವರನ್ನೂ ಸಸ್ಪೆಂಡ್‌ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Leave A Reply

Your email address will not be published.